Friday, July 24, 2026
Join WhatsApp Group
HomeLocal Newsಧಾರ್ಮಿಕ ನಂಬಿಕೆ ಬಲಪಡಿಸುವ ಅಗತ್ಯವಿದೆ: ಸಂಸದ ಕಾಗೇರಿ

ಧಾರ್ಮಿಕ ನಂಬಿಕೆ ಬಲಪಡಿಸುವ ಅಗತ್ಯವಿದೆ: ಸಂಸದ ಕಾಗೇರಿ

ಯಲ್ಲಾಪುರ, ಏ.10: ಇಂದಿನ ಯುವ ಸಮುದಾಯದಲ್ಲಿ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸಂಸದ Vishweshwar Hegde Kageri ಹೇಳಿದರು.

ತಾಲೂಕಿನ ಆನಗೋಡದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ಅಂಗವಾಗಿ ನವೀಕರಣಗೊಂಡ ದೇವಾಲಯ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

“ಹಲವಾರು ಸಮಸ್ಯೆಗಳ ನಡುವೆ ನಾವು ಸದಾ ಉತ್ತಮ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಯಾವುದೇ ಸಂಕಷ್ಟದ ಸಂದರ್ಭದಲ್ಲೂ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಪಡೆಯಲು ದೇವರಲ್ಲೇ ಮೊರೆ ಹೋಗಬೇಕು” ಎಂದು ಹೇಳಿದರು.

ಪ್ರದೇಶದ ಅಭಿವೃದ್ಧಿ ವಿಚಾರಕ್ಕೂ ಸ್ಪಂದಿಸಿದ ಕಾಗೇರಿ, ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯ ದುಸ್ಥಿತಿಯ ಬಗ್ಗೆ ತಮಗೂ ಹಾಗೂ ಶಾಸಕ Shivaram Hebbar ಅವರಿಗೆ ಅರಿವು ಇದ್ದು, ರಸ್ತೆ ನಿರ್ಮಾಣಕ್ಕಾಗಿ ಸಾಧ್ಯವಾದ ಪ್ರಯತ್ನಗಳನ್ನು ಒಟ್ಟಾಗಿ ಮಾಡುವುದಾಗಿ ಭರವಸೆ ನೀಡಿದರು.

ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಧಾರ್ಮಿಕ ಶ್ರದ್ಧೆ ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯವಾಗಿದ್ದು, ತಾವು ಸಹ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಉಪಸ್ಥಿತರಿದ್ದರು. ದೇವಸ್ಥಾನ ಮೊಕ್ತೇಸರ ಗಣಪತಿ ಮಾನಿಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸತೀಶ ಯಲ್ಲಾಪುರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.



RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share