Saturday, May 30, 2026
HomeLocal Newsಸಾಂದರ್ಭಿಕ ಒಪ್ಪಂದದಲ್ಲಿ ಬಸ್ ಸೌಲಭ್ಯ

ಸಾಂದರ್ಭಿಕ ಒಪ್ಪಂದದಲ್ಲಿ ಬಸ್ ಸೌಲಭ್ಯ

ಕಾರವಾರ: ಮದುವೆ, ಉಪನಯನ ಮತು ಶುಭಕಾರ್ಯಗಳ ಕಾರ್ಯಕ್ರಮಗಳಿಗೆ ಭಾಗವಹಿಸುವವರಿಗಾಗಿ ವಾಕರಸಾ ಸಂಸ್ಥೆಯ ಉತ್ತರ ಕನ್ನಡ ವಿಭಾಗವು ಬಸ್ಸುಗಳನ್ನು ಪ್ರಾಸಂಗಿಕ ಪ್ರವಾಸದ ಕರಾರಿನ ಮೇರೆಗೆ ನೀಡುತ್ತಿದೆ.

ವಾಯವ್ಯ ಕರ್ನಾಟಕ ಬಿಎಸ್-4 ಬಸ್ಸುಗಳಿಗೆ ಪ್ರತಿ ಕಿ.ಮೀಗೆ ರೂ. 54ರಂತೆ ರಾಜ್ಯದೊಳಗೆ ಪ್ರತಿ ದಿನಕ್ಕೆ (24 ತಾಸು) ಕನಿಷ್ಟ 350 ಕಿ.ಮೀ ದರ ಹಾಗೂ ಬಿಎಸ್-6 ಬಸ್ಸುಗಳಿಗೆ ಪ್ರತಿ ಕಿ.ಮೀಗೆ ರೂ. 58ರಂತೆ ಪ್ರತಿದಿನಕ್ಕೆ (24 ತಾಸು) ಕನಿಷ್ಟ 375 ಕಿ.ಮೀ ದರ ನಿಗದಿ ಪಡಿಸಲಾಗಿದೆ.

ಕೊನೆಯ ಕ್ಷಣಕ್ಕೆ ಕಾಯದೇ ಮುಂಚಿತವಾಗಿ ಬಸ್ಸುಗಳನ್ನು ಕಾಯ್ದಿರಿಸಲು ತಮ್ಮ ಸಮೀಪದ ಉತ್ತರ ಕನ್ನಡ ವಿಭಾಗದ ಘಟಕ ವ್ಯಸಸ್ಥಾಪಕರು, ಶಿರಸಿ-7760991725, ಕುಮಟಾ-7760991726, ಕಾರವಾರ-7760991727, ಕಾರವಾರ-7760991727, ಭಟ್ಕಳ-7760991729, ಯಲ್ಲಾಪುರ-8762721591, ಅಂಕೋಲಾ-7338039284, ಮುಂಡಗೋಡ-7760991712 ಸಂಪರ್ಕಿಸುವಂತೆ ವಾ.ಕ.ರ.ಸಾ ಸಂಸ್ಥೆಯ ಉ.ಕ ವಿಭಾಗದ ಶಿರಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share