Friday, July 24, 2026
Join WhatsApp Group
HomeUncategorizedಆನ್‌ಲೈನ್ ಹೂಡಿಕೆ ಹೆಸರಿನಲ್ಲಿ 10.60 ಲಕ್ಷ ರೂ ವಂಚನೆ

ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ 10.60 ಲಕ್ಷ ರೂ ವಂಚನೆ

ದಾಂಡೇಲಿ: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಿವೃತ್ತ ವ್ಯಕ್ತಿಯೊಬ್ಬರಿಂದ 10.60 ಲಕ್ಷ ರೂ ಹಣ ಲಪಟಾಯಿಸಿದ ಘಟನೆ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾಯಿ ನಗರ ನಿವಾಸಿ, ಡಿಫೆನ್ಸ್ ಸೇವೆಯಿಂದ ನಿವೃತ್ತರಾದ ದಿವಾಕರ ನಾರಾಯಣ (66) ವಂಚನೆಗೆ ಒಳಗಾದವರು. ಇವರ ಪತ್ನಿ ಫೇಸ್‌ಬುಕ್ ಬಳಸುವ ವೇಳೆ “ಹಣ ಹೂಡಿಕೆ ಮಾಡಿ ಡಾಲರ್ ರೂಪದಲ್ಲಿ ಹೆಚ್ಚಿನ ಲಾಭ ಪಡೆಯಿರಿ” ಎಂಬ ಸರ್ಕಾರಿ ಯೋಜನೆ ಎಂಬ ಭ್ರಮೆ ಮೂಡಿಸುವ ಜಾಹೀರಾತನ್ನು ಕ್ಲಿಕ್ ಮಾಡಿದ್ದು, ಬಳಿಕ ತಮ್ಮ ಸಂಪರ್ಕ ವಿವರಗಳನ್ನು ನೀಡಿದ್ದರು.

ನಂತರ ಅಪರಿಚಿತರು ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಹಾಗೂ ವಾಟ್ಸಪ್ ಸಂದೇಶಗಳನ್ನು ಕಳುಹಿಸಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. “quantro-ai.com” ಎಂಬ ವೆಬ್‌ಸೈಟ್ ಮೂಲಕ ಅವರ ವಿವರಗಳನ್ನು ಪಡೆದುಕೊಂಡು, ಆರಂಭದಲ್ಲಿ ನೋಂದಣಿ ಶುಲ್ಕವಾಗಿ 10,000 ಹಾಗೂ 12,000 ರೂ ವಸೂಲಿ ಮಾಡಿದ್ದಾರೆ. ಬಳಿಕ ನಕಲಿ ಲಾಭ ತೋರಿಸಿ ನಂಬಿಕೆ ಮೂಡಿಸಿದ್ದಾರೆ.

ಆನಂತರ, “ನಿಮ್ಮ ಹಣ ಡಾಲರ್ ರೂಪದಲ್ಲಿದೆ, ಅದನ್ನು ವಾಪಸು ಪಡೆಯಲು ಹೆಚ್ಚುವರಿ ಶುಲ್ಕ ಪಾವತಿಸಬೇಕು” ಎಂದು ನಂಬಿಸಿ, ಫೆಬ್ರವರಿಯಿಂದ ಏಪ್ರಿಲ್ ತನಕ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 10,60,436 ರೂ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಕೆನರಾ ನೆಕ್ಸ್ಟ್‌ ಜಾಹೀರಾತು

ಆದರೆ ಹೂಡಿಕೆ ಮಾಡಿದ ಹಣ ವಾಪಸು ಬಾರದಿರುವುದನ್ನು ಗಮನಿಸಿದ ದೂರುದಾರರು, ಬ್ಯಾಂಕ್‌ನಿಂದ ಬಂದ ಮಾಹಿತಿ ಮೂಲಕ ತಮ್ಮ ಹಣ ಸೈಬರ್ ಕ್ರೈಂ ಸಂಬಂಧಿತ ಖಾತೆಗಳಿಗೆ ಹೋಗಿರುವುದನ್ನು ತಿಳಿದು ಮೋಸ ಹೋಗಿರುವುದು ಅರಿತು ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share