Monday, September 7, 2026
Join WhatsApp Group
HomeLocal Newsʻಗ್ರಾಮ ಒನ್‌ʼ ಕೇಂದ್ರ ಆರಂಭಿಸಲು ಇಲ್ಲಿದೆ ಅವಕಾಶ

ʻಗ್ರಾಮ ಒನ್‌ʼ ಕೇಂದ್ರ ಆರಂಭಿಸಲು ಇಲ್ಲಿದೆ ಅವಕಾಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 20 ಗ್ರಾಮ ಪಂಚಾಯಿತಿಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲು ಪ್ರಾಂಚೈಸಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗ್ರಾಮೀಣ ಪ್ರದೇಶದ ನಾಗರಿಕರಿಗೆ ವಿವಿಧ ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಆಸಕ್ತ ಪ್ರಾಂಚೈಸಿಗಳು ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸದಾಗಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಗುರುತಿಸಲಾದ ಗ್ರಾಮ ಪಂಚಾಯಿತಿಗಳು:

  • ಅಂಕೋಲಾ ತಾಲೂಕು: ಅಲಗೇರಿ
  • ಭಟ್ಕಳ ತಾಲೂಕು: ಕೊಪ್ಪ
  • ದಾಂಡೇಲಿ ತಾಲೂಕು: ಆಲೂರು, ಅಂಬೇವಾಡಿ
  • ಹೊನ್ನಾವರ ತಾಲೂಕು: ಕೋಡಣಿ
  • ಕಾರವಾರ ತಾಲೂಕು: ಕೆರವಡಿ
  • ಕುಮಟಾ ತಾಲೂಕು: ಬರ್ಗಿ
  • ಸಿದ್ದಾಪುರ ತಾಲೂಕು: ನಿಲಕುಂದ, ಅನಲೆಬೈಲ್
  • ಶಿರಸಿ ತಾಲೂಕು: ಮಂಜುಗುಣಿ, ಹುಲೇಕಲ್, ಸುಗಾವಿ, ಸಾಲ್ಕಣಿ, ನೆಗ್ಗು
  • ಜೋಯಿಡಾ (ಸೂಪಾ) ತಾಲೂಕು: ಅಣಶಿ, ಬಂಜಾರ್‌ಕುಣಂಗ, ಶಿಂಗಾರಗಾಂವ್, ನಾಗೋಡ್, ಉಳವಿ
  • ಯಲ್ಲಾಪುರ ತಾಲೂಕು: ನಂದೊಳ್ಳಿ

ಆಸಕ್ತ ಅಭ್ಯರ್ಥಿಗಳು ಜೂನ್ 15ರೊಳಗೆ ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ತಾಲೂಕಿನ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share