ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸುವ Type-C ಪೋರ್ಟ್ ಅನ್ನು ಬಹುತೇಕ ಜನರು ಚಾರ್ಜಿಂಗ್‌ಗೆ ಮಾತ್ರ ಬಳಸುತ್ತಾರೆ. ಆದರೆ ಸತ್ಯ ಏನೆಂದರೆ, ಈ ಸಣ್ಣ ಪೋರ್ಟ್ ಒಳಗೆ ಅಡಗಿರುವ ಸಾಮರ್ಥ್ಯ ಕೇವಲ ನಿಮ್ಮ ಡಿವೈಸ್‌ನ್ನು ಚಾರ್ಜ್ ಮಾಡುವುದಷ್ಟೇ ಅಲ್ಲ. ಸರಿಯಾಗಿ ಬಳಸಿದರೆ, ನಿಮ್ಮ ಫೋನ್ ಪವರ್ ಬ್ಯಾಂಕ್ ಆಗಬಹುದು, ಲ್ಯಾಪ್‌ಟಾಪ್ ತರಹ ಕೆಲಸ ಮಾಡಬಹುದು, ಮೊಬೈಲ್‌ನಿಂದ ಟಿವಿಯಲ್ಲಿ ಸಿನಿಮಾ ಸ್ಟ್ರೀಮ್ ಕೂಡ ಮಾಡಬಹುದು!
ಪವರ್ ಬ್ಯಾಂಕ್: ಈ ವಿಷಯ ಅನೇಕರಿಗೆ ಗೊತ್ತೇ ಇಲ್ಲ. ನಿಮ್ಮ ಫೋನ್‌ನಲ್ಲಿ Type-C to Type-C ಕೇಬಲ್ ಬಳಸಿ, ಇಯರ್‌ಬಡ್ಸ್, ಸ್ಮಾರ್ಟ್‌ವಾಚ್ ಮುಂತಾದ ಸಣ್ಣ ಡಿವೈಸ್‌ಗಳನ್ನು ಚಾರ್ಜ್ ಮಾಡಬಹುದು. ಚಾರ್ಜರ್ ಇಲ್ಲದ ತುರ್ತು ಸಂದರ್ಭದಲ್ಲಿ ಇದು ತುಂಬಾ ಉಪಯುಕ್ತವಾಗುತ್ತದೆ.
ಡೇಟಾ ಟ್ರಾನ್ಸ್‌ಫರ್: ಕ್ವಿಕ್ ಶೇರ್ ಅಥವಾ ಏರ್‌ಡ್ರಾಪ್ ಕೆಲವೊಮ್ಮೆ ನಿಧಾನವಾಗಬಹುದು. ಆದರೆ Type-C to Type-C ಕೇಬಲ್ ಬಳಸಿ ಎರಡು ಫೋನ್‌ಗಳನ್ನು ನೇರವಾಗಿ ಕನೆಕ್ಟ್ ಮಾಡಿದರೆ, ದೊಡ್ಡ ಫೈಲ್‌ಗಳನ್ನೂ ಕ್ಷಣಗಳಲ್ಲಿ ವರ್ಗಾಯಿಸಬಹುದು. ಒಂದು ಫೋನ್‌ನ ಸ್ಟೋರೇಜ್ ಮತ್ತೊಂದು ಫೋನ್‌ನಿಂದಲೇ ತೆರೆದುಕೊಳ್ಳುತ್ತದೆ!
ಲ್ಯಾಪ್‌ಟಾಪ್ ಕೂಡ!: ಸ್ಮಾರ್ಟ್‌ಫೋನ್‌ನ್ನೇ ಲ್ಯಾಪ್‌ಟಾಪ್ ತರಹ ಬಳಸಬಹುದಾ? ಹೌದು! Type-C ಪೋರ್ಟ್ ಮೂಲಕ Bluetooth ಡಾಂಗಲ್ ಅಥವಾ USB ಅಡಾಪ್ಟರ್ ಜೋಡಿಸಿ, ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್ ಬಳಸಬಹುದು. ಉದ್ದನೆಯ ಇಮೇಲ್ ಬರೆಯಬೇಕಾದಾಗ ಅಥವಾ ಟಚ್‌ಸ್ಕ್ರೀನ್ ಕೆಲಸ ಮಾಡದ ಸಂದರ್ಭದಲ್ಲಿ ಇದು ಸಹಕಾರಿಯಾಗುತ್ತದೆ.
ಇವಿಷ್ಟೇ ಅಲ್ಲದೆ, HDMI to Type-C ಕೇಬಲ್ ಬಳಸಿ ನಿಮ್ಮ ಫೋನ್‌ನ ಸ್ಕ್ರೀನ್ ಅನ್ನು ನೇರವಾಗಿ ಟಿವಿಗೆ ಮಿರರ್ ಮಾಡಬಹುದು. ಸಿನಿಮಾ, ವೆಬ್‌ಸೀರಿಸ್, ಯೂಟ್ಯೂಬ್ ಎಲ್ಲವೂ ದೊಡ್ಡ ಪರದೆಯಲ್ಲಿ ನೋಡಬಹುದು.
ಒಟ್ಟಿನಲ್ಲಿ ಹೇಳಬೇಕಾದರೆ, Type-C ಪೋರ್ಟ್ ಒಂದು ಚಾರ್ಜಿಂಗ್‌ಗೆ ಮಾತ್ರವಲ್ಲ. ಇದು ನಿಮ್ಮ ಫೋನ್‌ನ ಸಾಮರ್ಥ್ಯವನ್ನು ಹೆಚ್ಚಿಸುವ ಸ್ಮಾರ್ಟ್ ದ್ವಾರ. ಸರಿಯಾಗಿ ಬಳಸಿದರೆ, ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಇನ್ನೂ ಹೆಚ್ಚು ಸ್ಮಾರ್ಟ್ ಆಗುತ್ತದೆ!