ಯಲ್ಲಾಪುರ: ತಾಲೂಕಿನ ಉಪಳೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ದತ್ತಾತ್ರಯ ಎಂ.ಭಟ್ಟ ಮುಂಡಗೆಜಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದತ್ತಾತ್ರಯ ಭಟ್ಟ, ಸಂಘವು ಪ್ರಸಕ್ತ ಸಾಲಿನಲ್ಲಿ ರೂ.2.14 ಲಕ್ಷ ವ್ಯಾಪಾರಿ ಲಾಭ ಗಳಿಸಿದ್ದು, ರೂ.43,090 ನಿವ್ವಳ ಲಾಭ ದಾಖಲಿಸಿದೆ. ಸಂಘವು ಒಟ್ಟು ರೂ.15.62 ಲಕ್ಷ ಮೊತ್ತದ ಹಾಲು ಖರೀದಿಸಿದ್ದು, ಸ್ಥಳೀಯವಾಗಿ ರೂ.2.79 ಲಕ್ಷ ಮೊತ್ತದ ಹಾಲು ಮಾರಾಟ ಮಾಡಲಾಗಿದೆ. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ನಿರ್ದೇಶಕರಾದ ನಾಗೇಶ ಭಟ್ಟ ಅಂಬುಳ್ಳಿ, ಎಸ್.ಕೆ. ಭಾಗ್ವತ್, ನರಸಿಂಹ ಸಾತೊಡ್ಡಿ, ನರಸಿಂಹ ಸಿದ್ದಿ, ಎಂ.ಎಸ್. ಹೆಗಡೆ, ಮಾದೇವಿ ಗಣಪತಿ ಸಿದ್ದಿ, ವನಿತಾ ಅಗೇರ್, ಹಾಲು ಉತ್ಪಾದಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಗಜಾನನ ಟಿ. ಹೆಗಡೆ ಕಂಚನಳ್ಳಿ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿ ಸಭೆಯನ್ನು ನಿರ್ವಹಿಸಿದರು.


