Friday, October 23, 2026
HomeLocal Newsಬಡವರ ಮನೆ ಹಕ್ಕು ಕಸಿಯುತ್ತಿರುವ ಕಾಂಗ್ರೆಸ್: ಬಿಜೆಪಿ ಆಕ್ರೋಶ

ಬಡವರ ಮನೆ ಹಕ್ಕು ಕಸಿಯುತ್ತಿರುವ ಕಾಂಗ್ರೆಸ್: ಬಿಜೆಪಿ ಆಕ್ರೋಶ

ಯಲ್ಲಾಪುರ: ಗ್ರಾಮೀಣ ಭಾಗದ ಬಡವರ ಮನೆ ಹಾಗೂ ನಿವೇಶನದ ಹಕ್ಕನ್ನು ಕಸಿಯುತ್ತಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ ಬಿಜೆಪಿ ಯಲ್ಲಾಪುರ ಮಂಡಲದ ವತಿಯಿಂದ ಚಂದಗುಳಿ ಹಾಗೂ ನಂದೊಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಚಂದಗುಳಿ ಶಕ್ತಿ ಕೇಂದ್ರದ ಪ್ರಮುಖ ಸುಬ್ಬಣ್ಣ ಉದ್ದಾಬೈಲ, ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಇಂದಿನ ಗ್ರಾಮೀಣಾಭಿವೃದ್ಧಿ ಸಚಿವರು ಕೃಷಿಕರು ಜಾನುವಾರುಗಳನ್ನು ಸಮೀಪದ ಅರಣ್ಯಕ್ಕೆ ಮೇಯಲು ಬಿಡಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿ ಬಡವರು ಹಾಗೂ ಕೃಷಿಕರ ವಿರುದ್ಧ ನಿಂತಿದ್ದರು ಎಂದು ಆರೋಪಿಸಿದರಲ್ಲದೆ, ಇಂತಹ ಸಚಿವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಂಡಳ ಪ್ರಭಾರಿ ನಾಗರಾಜ ನಾಯಕ, ಜಿಲ್ಲಾ ಪದಾಧಿಕಾರಿಗಳಾದ ಉಮೇಶ್ ಭಾಗ್ವತ, ರಾಘವೇಂದ್ರ ಭಟ್ಟ, ಅಪ್ಪು ಆಚಾರಿ, ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಉಪಾಧ್ಯಕ್ಷ ನಾಗರಾಜ ಕವಡಿಕೇರಿ, ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ, ಶಕ್ತಿ ಕೇಂದ್ರ ಪ್ರಮುಖರಾದ ಪರಮೇಶ್ವರ ಕೊಂಬೆ, ವೆಂಕಟ್ರಮಣ ಕಿರಕುಂಬತ್ತಿ, ಟಿ.ಆರ್. ಹೆಗಡೆ, ಕೃಷ್ಣ ಹೆಗಡೆ ಜೂಜಿನಬೈಲ್ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಸರ್ಕಾರದ ಬಡವರ ವಿರೋಧಿ ನೀತಿಯ ವಿರುದ್ಧ ಧ್ವನಿ ಎತ್ತಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share