Friday, March 13, 2026
HomeLocal Newsಮಾರಿಕಾಂಬೆಯ ದರ್ಶನ, ಪೂಜಾ ಸಮಯದಲ್ಲಿ ಬದಲಾವಣೆ

ಮಾರಿಕಾಂಬೆಯ ದರ್ಶನ, ಪೂಜಾ ಸಮಯದಲ್ಲಿ ಬದಲಾವಣೆ

ಶಿರಸಿ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆ ವಿಶೇಷ ಬದಲಾವಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿರುವ ಈ ದೇವಾಲಯದಲ್ಲಿ ಭಕ್ತರ ದರ್ಶನ ಹಾಗೂ ಪೂಜಾ ಸಮಯವನ್ನು ತಾತ್ಕಾಲಿಕವಾಗಿ ಪರಿಷ್ಕರಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಿಸಿದೆ.

ಮಂಗಳವಾರ ಚಂದ್ರಗ್ರಹಣ ಇರುವುದರಿಂದ ಭಕ್ತರಿಗೆ ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಂದಿನಂತೆ ದೇವಿಯ ದರ್ಶನ ಹಾಗೂ ಪೂಜಾ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಹಣ ಕಾಲಾವಧಿ ಇರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ಇರುತ್ತದೆ. ಈ ಸಮಯದಲ್ಲಿ ಯಾವುದೇ ಪೂಜಾ ಕೈಂಕರ್ಯಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಗ್ರಹಣ ಮುಕ್ತವಾದ ನಂತರ ಸಂಜೆ 7.30ಕ್ಕೆ ದೇವಾಲಯದ ಅರ್ಚಕರು ಶುದ್ಧೀಕರಣ ಪೂಜೆಯನ್ನು ನೆರವೇರಿಸಿ, ನಂತರ ರಾತ್ರಿ 10 ಗಂಟೆಯವರೆಗೆ ಪೂಜೆ, ಸೇವೆ ಹಾಗೂ ದರ್ಶನ ಎಂದಿನಂತೆ ಮುಂದುವರಿಯಲಿದೆ.

ಗ್ರಹಣದ ಕಾರಣದಿಂದಾಗಿ ಅಂದು ಮಧ್ಯಾಹ್ನ ದೇವಸ್ಥಾನದ ವತಿಯಿಂದ ನೀಡಲಾಗುವ ಅನ್ನಪ್ರಸಾದ (ಅನ್ನದಾನ) ವಿತರಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಕ್ತರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.

ಚಂದ್ರಗ್ರಹಣದ ಪರಿಣಾಮವಾಗಿ ಜಾತ್ರೆಯ ಕಾರ್ಯಕ್ರಮದಲ್ಲಿ ತಾತ್ಕಾಲಿಕ ಬದಲಾವಣೆ ಆಗಿದ್ದರೂ, ಭಕ್ತರ ಭದ್ರತೆ ಹಾಗೂ ಆಚರಣಾ ನಿಯಮಗಳನ್ನು ಪಾಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share