Thursday, July 23, 2026
Join WhatsApp Group
HomeHealthವಯಸ್ಸಾಗುವುದು ಪಾದಗಳಿಂದ ಆರಂಭವಾಗುತ್ತದೆ!

ವಯಸ್ಸಾಗುವುದು ಪಾದಗಳಿಂದ ಆರಂಭವಾಗುತ್ತದೆ!


ವಯಸ್ಸು 60 ಆದರೂ ಇನ್ನೂ ಲವಲವಿಕೆಯಿಂದ, ಚುರುಕಾಗಿ ಇರಬೇಕೆಂಬುದು ಎಲ್ಲರ ಆಸೆ. ವಯಸ್ಸು ಎಂದರೆ ಬಿಳಿಕೂದಲು, ಸಡಿಲವಾದ ಚರ್ಮ ಅಥವಾ ಮುಖದ ಸುಕ್ಕುಗಳಷ್ಟೇ ಅಲ್ಲ. ನಿಜವಾಗಿ ವಯಸ್ಸಾಗುವ ಪ್ರಕ್ರಿಯೆ ಕಾಲುಗಳ ದುರ್ಬಲತೆಯಿಂದ ಆರಂಭವಾಗುತ್ತದೆ.
ನಮಗೆ ವಯಸ್ಸಾಗುತ್ತಿದ್ದಂತೆ ಕಾಲುಗಳು ಸಕ್ರಿಯವಾಗಿದ್ದು, ಬಲವಾಗಿರುವುದು ಅತ್ಯಂತ ಅಗತ್ಯ. ಕಾಲುಗಳು ಚುರುಕಾಗಿದ್ದರೆ ದೇಹವೂ ಚುರುಕಾಗಿರುತ್ತದೆ, ಮನಸ್ಸೂ ಚೈತನ್ಯದಿಂದಿರುತ್ತದೆ. ಮಾನವ ದೇಹದ ಸುಮಾರು ಅರ್ಧ ಭಾಗದ ಮೂಳೆಗಳು ಮತ್ತು ಸ್ನಾಯುಗಳು ಕಾಲುಗಳಲ್ಲಿಯೇ ಇವೆ.
ದೊಡ್ಡ ಮತ್ತು ಬಲವಾದ ಕೀಲುಗಳು, ಮುಖ್ಯ ನರಗಳು ಹಾಗೂ ರಕ್ತನಾಳಗಳ ದೊಡ್ಡ ಭಾಗ ಕಾಲುಗಳಲ್ಲಿರುವುದರಿಂದ ಅವು ದೇಹದ ಸಂಪೂರ್ಣ ತೂಕವನ್ನು ಹೊರುವ ಸ್ತಂಭಗಳಂತಿವೆ. ದೀರ್ಘಕಾಲ ಚಲನೆಯಿಲ್ಲದೆ ಕುಳಿತರೆ ಅಥವಾ ಮಲಗಿದ್ದರೆ ಕಾಲುಗಳ ಸ್ನಾಯುಬಲ ವೇಗವಾಗಿ ಕುಸಿಯುತ್ತದೆ ಮತ್ತು ಒಮ್ಮೆ ದುರ್ಬಲವಾದ ಸ್ನಾಯುಗಳನ್ನು ಮತ್ತೆ ಬಲಪಡಿಸಲು ಬಹಳ ಸಮಯ ಬೇಕಾಗುತ್ತದೆ.
ಕಾಲುಗಳ ಚಲನೆಯೇ ರಕ್ತಸಂಚಾರವನ್ನು ಸುಧಾರಿಸುತ್ತದೆ. ಅದಕ್ಕಾಗಿಯೇ ಮೊಣಕಾಲಿನ ಕೆಳಭಾಗವನ್ನು “ಎರಡನೇ ಹೃದಯ” ಎಂದು ಕರೆಯಲಾಗುತ್ತದೆ. ಕಾಲುಗಳು ಬಲವಾಗಿದ್ದರೆ ಹೃದಯಕ್ಕೂ ಸಹಾಯವಾಗುತ್ತದೆ.
ವಯಸ್ಸಾದಂತೆ ಮೆದುಳು ಮತ್ತು ಕಾಲುಗಳ ನಡುವಿನ ಆಜ್ಞೆಗಳ ಸಂವಹನ ನಿಧಾನಗೊಳ್ಳುತ್ತದೆ. ಆದ್ದರಿಂದ ಚಲನವೇ ಯೌವನವನ್ನು ಉಳಿಸುವ ಪ್ರಮುಖ ಸಾಧನ. 60 ವರ್ಷಗಳ ನಂತರವೂ ನಡೆಯುವುದು ನಿತ್ಯದ ಅಭ್ಯಾಸವಾಗಬೇಕು. ದಿನಕ್ಕೆ ಕನಿಷ್ಠ 30–40 ನಿಮಿಷಗಳ ನಡಿಗೆ ಸಾಕು. ಹೆಜ್ಜೆಗಳ ಒತ್ತಡವಿಲ್ಲದೆ ನಿಯಮಿತವಾಗಿ ನಡೆಯುವುದೇ ಮುಖ್ಯ.
ಇರುವೆ ಮೆಲ್ಲಮೆಲ್ಲನೆ ಸಾಗುತ್ತಾ ದೂರದ ಗುರಿ ತಲುಪುವಂತೆ, ನಾವು ಪ್ರತಿದಿನ ನಡೆಯುತ್ತಿದ್ದರೆ ನಮಗೇ ತಿಳಿಯದಂತೆ ಆರೋಗ್ಯ ಭಾಗ್ಯವನ್ನು ಸಂಪಾದಿಸುತ್ತೇವೆ. ಆದ್ದರಿಂದ ದೇಹಕ್ಕೂ-ಮನಸ್ಸಿಗೂ ಹಿತವಾಗಲು ಪ್ರತಿದಿನ ತಪ್ಪದೇ ನಡೆಯಿರಿ. ಆರೋಗ್ಯವೇ ನಮ್ಮ ಜೀವನದ ಅತಿ ದೊಡ್ಡ ಸಂಪತ್ತಲ್ಲವೇ?!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share