Friday, July 24, 2026
Join WhatsApp Group
HomeAgricultureಪಿಎಂ ಕಿಸಾನ್; ಹಣ ಬಂತಾ? ಹೀಗೆ ಚೆಕ್‌ ಮಾಡಿ

ಪಿಎಂ ಕಿಸಾನ್; ಹಣ ಬಂತಾ? ಹೀಗೆ ಚೆಕ್‌ ಮಾಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 13, 2026ರಂದು ಅಸ್ಸಾಂನ ಗುಹವಾಟಿ ನಗರದಲ್ಲಿ ಪಿಎಂ-ಕಿಸಾನ್ ಯೋಜನೆಯ 22ನೇ ಕಂತನ್ನು ಬಿಡುಗಡೆ ಮಾಡಿದರು.

ದೇಶದ 9.7 ಕೋಟಿ ರೈತರ ಖಾತೆಗೆ ತಲಾ 2 ಸಾವಿರ ರೂ.ನಂತೆ ಒಟ್ಟು ಸುಮಾರು 20,500 ಕೋಟಿ ರೂ ಹಣವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ಜಮಾ ಮಾಡಲಾಗಿದೆ.

ಯೋಜನೆಯ ಪ್ರಯೋಜನ ಎಲ್ಲ ಅರ್ಹ ರೈತರಿಗೆ ತಲುಪಬೇಕಾದರೂ, ಕೆಲವರಿಗೆ ಹಣ ಬರದಿರುವ ಸಾಧ್ಯತೆ ಇದೆ.

ಅಂತಹವರು ಸಹಾಯಕ್ಕಾಗಿ ಅಧಿಕೃತ ಹೆಲ್ಪ್‌ಲೈನ್ ಸಂಖ್ಯೆಗಳಾದ 155261 ಅಥವಾ 011-24300606ಗೆ ಕರೆ ಮಾಡಬಹುದು. ಈ ಸೇವೆ ವಾರದ ಕಾರ್ಯದಿನಗಳಲ್ಲಿ ಬೆಳಗ್ಗೆ 9:30ರಿಂದ ಸಂಜೆ 6ರವರೆಗೆ ಲಭ್ಯವಿದೆ.

ವೆಬ್‌ಸೈಟ್ ಮೂಲಕ ಹೆಸರು ಪರಿಶೀಲನೆ:

  • PM Kisan official websiteಗೆ ಭೇಟಿ ನೀಡಿ.
  • “Farmers Corner” ಆಯ್ಕೆ ಮಾಡಿ.
  • “Beneficiary Status” ಕ್ಲಿಕ್ ಮಾಡಿ.
  • ಆಧಾರ್ ಸಂಖ್ಯೆ / ಬ್ಯಾಂಕ್ ಖಾತೆ / ಮೊಬೈಲ್ ಸಂಖ್ಯೆ ನಮೂದಿಸಿ.
  • ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬಹುದು.

ಮೊಬೈಲ್ App ಮೂಲಕ ಪರಿಶೀಲನೆ:
ಪಿಎಂ ಕಿಸಾನ್ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು.

ಈ ಯೋಜನೆ ದೇಶದ ಭೂಸ್ವಾಮ್ಯ ಹೊಂದಿರುವ ರೈತ ಕುಟುಂಬಗಳಿಗೆ ಆರ್ಥಿಕ ಬೆಂಬಲ ಒದಗಿಸುವ ಪ್ರಮುಖ ಕೇಂದ್ರ ಸರ್ಕಾರದ ಯೋಜನೆಯಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share