ಶಿರಸಿ/ಸಿದ್ದಾಪುರ: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಒಬ್ಬನಿಗೆ ಸಿದ್ದಾಪುರ ನ್ಯಾಯಾಲಯವು 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಿದ್ದಾಪುರ ಪೊಲೀಸ್ ಠಾಣೆಯ ಗುನ್ನಾ ನಂ. 85/2023 ಪ್ರಕರಣದ 2ನೇ ಆರೋಪಿ ಜಿಯಾವುಲ್ಲಾ (ತಂದೆ: ಬಾಷಾಸಾಬ್), ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಳ್ಳೂರಕೇರಿ ನಿವಾಸಿ, ನ್ಯಾಯಾಲಯದ ಆವರಣದಿಂದ ಪರಾರಿಯಾಗಿದ್ದ. ಈ ಸಂಬಂಧ ಗುನ್ನಾ ನಂ. 86/2023 ಅಡಿಯಲ್ಲಿ ಐಪಿಸಿ ಕಲಂ 224 ಪ್ರಕಾರ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಯು ಕಳೆದ ಮೂರು ತಿಂಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಪೊಲೀಸರ ಕಾರ್ಯಾಚರಣೆಯಿಂದ ಏಪ್ರಿಲ್ 6, 2026 ರಂದು ಭಟ್ಕಳದಲ್ಲಿ ಆರೋಪಿಯನ್ನು ಬಂಧಿಸಿ, ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ನ್ಯಾಯಾಲಯವು ಆರೋಪಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಈ ಕಾರ್ಯಾಚರಣೆಯನ್ನು ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಶಾಂತಿನಾಥ ಪಾಸಾನೆ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ (ಕಾ&ಸು), ಪ್ರೋಸೆಸ್ ಸಿಬ್ಬಂದಿಗಳಾದ ಸಿಎಚ್‌ಸಿ-1734 ಚೇತನಕುಮಾರ, ಸಿಪಿಸಿ-1981 ಅನಿಲ ನಾಯ್ಕ, ಸಿಪಿಸಿ-1742 ಪ್ರಸನ್ನ ನಾಯ್ಕ, ಸಿಪಿಸಿ-243 ಭರತಕುಮಾರ, ಸಿಪಿಸಿ-2038 ಶಶಿಕಾಂತ ಇವರ ತಂಡ ಯಶಸ್ವಿಯಾಗಿ ನೆರವೇರಿಸಿದೆ.
ಪ್ರಕರಣದ ಪತ್ತೆ ಮತ್ತು ಆರೋಪಿಯ ಬಂಧನದಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಮೇಲಾಧಿಕಾರಿಗಳು ಅಭಿನಂದಿಸಿದ್ದಾರೆ.