ಯಲ್ಲಾಪುರ: ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಾದ ಹಲಸಿನ ಚಿಪ್ಸ್ ಮತ್ತು ಹಲಸಿನ ಹಪ್ಪಳವನ್ನು ಮಾರುಕಟ್ಟೆ ಗುಣಮಟ್ಟಕ್ಕೆ ತಕ್ಕಂತೆ ತಯಾರಿಸುವ ವಿಧಾನಗಳ ಕುರಿತು ಪ್ರಾಯೋಗಿಕ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಹಲಸಿನ ಉತ್ಪನ್ನಗಳನ್ನು ಗೃಹೋದ್ಯಮವನ್ನಾಗಿ ರೂಪಿಸಲು ಆಸಕ್ತಿ ಹೊಂದಿರುವವರಿಗೆ ಈ ಕಾರ್ಯಾಗಾರ ಉತ್ತಮ ಅವಕಾಶವಾಗಿದ್ದು, ತಯಾರಿಕಾ ವಿಧಾನ, ಗುಣಮಟ್ಟ ನಿಯಂತ್ರಣ ಹಾಗೂ ಮಾರುಕಟ್ಟೆ ಬೇಡಿಕೆಗೆ ಅನುಗುಣವಾದ ಉತ್ಪಾದನೆ ಕುರಿತು ತರಬೇತಿ ನೀಡಲಾಗುತ್ತದೆ.
ಕಾರ್ಯಾಗಾರವು ಏಪ್ರಿಲ್ 21, 2026 ರಂದು ಬೆಳಿಗ್ಗೆ 10.30ಕ್ಕೆ ಯಲ್ಲಾಪುರದ ಕದಂಬ ಮಾರ್ಕೆಟಿಂಗ್, ಎಪಿಎಂಸಿ ಯಾರ್ಡ್ ನಲ್ಲಿ ನಡೆಯಲಿದೆ.
ಹಲಸಿನ ಉತ್ಪನ್ನಗಳ ಮೂಲಕ ಸ್ವ ಉದ್ಯೋಗ ಆರಂಭಿಸಲು ಬಯಸುವವರು ಕಾರ್ಯಾಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕದಂಬ ಸಂಸ್ಥೆಯ ಮಂಜುನಾಥ್ ಭಟ್ – 87627 59350, ವಿನಾಯಕ ಹೆಗಡೆ – 87629 90610 ಇವರನ್ನು ಸಂಪರ್ಕಿಸಬಹುದಾಗಿದೆ.
ಸಿ.ಸಿ.ಟಿ.ವಿ ಅಳವಡಿಕೆ, ಸೇವಾ ತರಬೇತಿ
ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ಮೇ 14ರಿಂದ ಸಿ.ಸಿ.ಟಿ.ವಿ ಅಳವಡಿಕೆ ಮತ್ತು ಸೇವಾ ಕಾರ್ಯಕ್ರಮ ಕುರಿತ 13 ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಸಕ್ತರು 18ರಿಂದ 50 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.
ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿಯ ಅವಧಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9481506564, 9380162042, 9113880324ನ್ನು ಸಂಪರ್ಕಿಸುವಂತೆ ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಥ್ಲೆಟಿಕ್, ಕುಸ್ತಿ ಕ್ರೀಡೆಗಳಿಗೆ ಬೇಸಿಗೆ ಶಿಬಿರ
ಹಳಿಯಾಳ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ 10ರಿಂದ 18 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಹಾಗೂ ಕುಸ್ತಿ ಕ್ರೀಡೆಗಳಿಗೆ ಬೇಸಿಗೆ ಶಿಬಿರ-2026ನ್ನು ಏ. 18ರಿಂದ ಮೇ. 2ರವರೆಗೆ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಹಾಗೂ ಸಂಜೆ 4.30ರಿಂದ 6.30ರವರೆಗೆ ತಾಲೂಕು ಕ್ರೀಡಾಂಗಣ ಹಳಿಯಾಳದಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಂಥ್ಲೆಟಿಕ್ ತರಬೇತುದಾರರು-8722516856 ಹಾಗೂ ಕುಸ್ತಿ ತರಬೇತುದಾರರನ್ನು 9945489193, 7022315684 ಸಂಖ್ಯೆಯಲ್ಲಿ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.