Saturday, May 30, 2026
HomeInformationpaytm ಮುಚ್ಚೋಯ್ತಂತೆ! ನಮ್ಮ ಹಣದ ಕಥೆಯೇನ್ರಿ?!

paytm ಮುಚ್ಚೋಯ್ತಂತೆ! ನಮ್ಮ ಹಣದ ಕಥೆಯೇನ್ರಿ?!

ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಅಧಿಕೃತವಾಗಿ Paytm Payments Bank‌ನ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಪಡಿಸಿದೆ. ಏಪ್ರಿಲ್ 24, 2026ರಿಂದಲೇ ಈ ನಿರ್ಧಾರ ಜಾರಿಗೆ ಬಂದಿದ್ದು, ಇದೀಗ ಬ್ಯಾಂಕ್‌ ಮುಚ್ಚುವ (winding-up) ಕಾನೂನು ಪ್ರಕ್ರಿಯೆ ಆರಂಭವಾಗಲಿದೆ.

 ಈ ಸುದ್ದಿ ಹೊರಬಿದ್ದ ತಕ್ಷಣವೇ ಅದೆಷ್ಟೋ ಜನ ಕಂಗಾಲಾಗಿದ್ದಾರೆ. ʻನಮ್ಮ Paytm ಆಪ್‌ ಈಗ ಕೆಲಸ ಮಾಡುತ್ತದೆಯೇ? ನಮ್ಮ ಹಣದ ಕಥೆ ಏನು?!ʼ ಆದರೆ ಮೊದಲು ತಿಳಿಯಬೇಕಾದ ಮುಖ್ಯ ವಿಷಯ, ನಾವು ಪ್ರತಿದಿನ ಬಳಸುವ Paytm ಆಪ್ ಮತ್ತು Paytm Payments Bank ಎರಡೂ ಬೇರೆ ಬೇರೆ!

Paytm Payments Bank ವಿರುದ್ಧ RBI ಕ್ರಮಗಳು ಹೊಸದಲ್ಲ. 2022ರಲ್ಲೇ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದನ್ನು RBI ನಿಷೇಧಿಸಿತ್ತು. 2024ರಲ್ಲಿ ಬ್ಯಾಂಕ್‌ನ ಕಾರ್ಯಾಚರಣೆಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿತ್ತು.

ಈಗ 2026ರಲ್ಲಿ ಪರವಾನಗಿ ಸಂಪೂರ್ಣ ರದ್ದು ಮಾಡಿರುವುದು ಅಂತಿಮ ಹಾಗೂ ಕಾನೂನುಬದ್ಧ ಹಂತ ಮಾತ್ರ. ಆರ್ಥಿಕ ತಜ್ಞ ಅಶ್ವಿನ್ ಪಾರೆಖ್ ಹೇಳುವಂತೆ, “ಇದು ಈಗಾಗಲೇ ದೂರವೇ ಇದ್ದ ದಂಪತಿಗೆ ಅಧಿಕೃತ ವಿಚ್ಛೇದನ ಘೋಷಿಸಿದಂತಾಗಿದೆ.”

ಬ್ಯಾಂಕ್‌ ಮುಚ್ಚುವ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ಠೇವಣಿದಾರರು ಮತ್ತು ವಾಲೆಟ್‌ನಲ್ಲಿ ಉಳಿದಿರುವ ಹಣ ಹೊಂದಿರುವವರಿಗೆ ಸಿಗಲಿದೆ. ಅಂದರೆ Paytm Payments Bank‌ನಲ್ಲಿ ಠೇವಣಿ ಇಟ್ಟಿರುವವರು ಹಾಗೂ Paytm Wallet‌ನಲ್ಲಿ ಬ್ಯಾಲೆನ್ಸ್ ಉಳಿಸಿಕೊಂಡಿರುವವರಿಗೆ ಮೊದಲಿಗೆ ಹಣ ಹಿಂತಿರುಗಿಸಲಾಗುತ್ತದೆ.

ಇದಾದ ಬಳಿಕ ಸರ್ಕಾರಕ್ಕೆ ಸಲ್ಲಬೇಕಾದ ಕಾನೂನುಬದ್ಧ ಬಾಕಿಗಳು ಮತ್ತು ಇತರ ಸಾಲದಾತರ ಹಣವನ್ನು ಪಾವತಿಸಲಾಗುತ್ತದೆ. ಕೊನೆಯಲ್ಲಿ ಉಳಿಯುವ ಮೊತ್ತವನ್ನು ಷೇರುದಾರರಿಗೆ ಹಂಚಲಾಗುತ್ತದೆ.

ಇಲ್ಲಿ ಸಾಮಾನ್ಯ ಬಳಕೆದಾರರು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯವೇನೆಂದರೆ, ನೀವು UPI ಪಾವತಿ, ಬಿಲ್ ಪೇಮೆಂಟ್‌, QR ಸ್ಕ್ಯಾನ್‌, ಮೊಬೈಲ್ ರೀಚಾರ್ಜ್‌ ಮುಂತಾದ ಕೆಲಸಗಳಿಗೆ ಬಳಸುವ Paytm ಆಪ್‌ Paytm Payment Services Limited ಇವೆರಡೂ ಬೇರೆ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತದೆ.

ಈ ಸಂಸ್ಥೆಗೆ RBI ನೀಡಿರುವುದು Payments Aggregator License ಆಗಿದ್ದು, ಇದು ಬ್ಯಾಂಕಿಂಗ್ ಲೈಸೆನ್ಸ್‌ನಿಂದ ಸಂಪೂರ್ಣ ವಿಭಿನ್ನವಾಗಿದೆ. ಹೀಗಾಗಿ Paytm Payments Bank ಮುಚ್ಚಬಹುದು, ಆದರೆ Paytm UPI ಸೇವೆಗಳು ಮುಂದುವರಿಯುತ್ತವೆ.

ಕಾರ್ಯಾಚರಣೆಯ ದೃಷ್ಟಿಯಿಂದ ದೊಡ್ಡ ಸಮಸ್ಯೆ ಇಲ್ಲದಿದ್ದರೂ, Paytmಗೆ ದೊಡ್ಡ ಹೊಡೆತ ಬಿದ್ದಿರುವುದು ಅದರ ಬ್ರ್ಯಾಂಡ್ ವಿಶ್ವಾಸಕ್ಕೆ. ಇದರಿಂದ ಗ್ರಾಹಕರ ಮನಸ್ಸಿನಲ್ಲಿ ಅನುಮಾನ ಮೂಡುವ ಸಾಧ್ಯತೆ ಇದೆ.

ಆದರೆ Paytm ಆಪ್‌ ಬಳಸುವ ಸಾಮಾನ್ಯ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. Paytm Payments Bank ಮುಚ್ಚುತ್ತಿದೆ, ಆದರೆ Paytm UPI App ಮುಂದುವರಿಯುತ್ತದೆ. Wallet ಮತ್ತು Deposit holders‌ರಿಗೆ ಹಣ ಹಿಂತಿರುಗುತ್ತದೆ. ಹೀಗಾಗಿ ತಕ್ಷಣ ಆಪ್‌ ಅಳಿಸುವ ಅಗತ್ಯವಿಲ್ಲ. ಆದರೆ Paytm Payments Bank‌ನಲ್ಲಿ ಹಣ ಉಳಿಸಿಕೊಂಡಿರುವವರು ಅಧಿಕೃತ ಮಾಹಿತಿ ಮತ್ತು ಹಣ ಹಿಂತಿರುಗಿಸುವ ಪ್ರಕ್ರಿಯೆಯನ್ನು ಗಮನಿಸುತ್ತಿರುವುದು ಒಳ್ಳೆಯದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share