ದಾಂಡೇಲಿ: ದಾಂಡೇಲಿ ನಗರಸಭೆ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲ ಚೇತನರಿಗೆ 2022-23ನೇ ಸಾಲಿನ ನಗರೋತ್ಥಾನ ಹಂತ-4 ಯೋಜನೆಯ ಶೇ.20 (ಪೌರಕಾರ್ಮಿಕರಿಗೆ) ಶೇ. 24.10 (ಪರಿಶಿಷ್ಟ ಜಾತಿ/ಪರಿಶಿಷ ಪಂಗಡ) ಹಾಗೂ ಶೇ. 5ರಡಿ (ವಿಕಲಚೇತನ) ವಿವಿಧ ವೈಯಕ್ತಿಕ ಸೌಲಭ್ಯಗಳ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ. 15ರವರೆಗೆ ವಿಸ್ತರಿಸಲಾಗಿದೆ.
ನಗರದ ಅರ್ಹ, ಅಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಅಂತಿಮ ದಿನಾಂಕದ ಸಂಜೆ 5 ಗಂಟೆಯೊಳಗಾಗಿ ನಗರಸಭೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಹಾಗೂ ಸದರಿ ಅವಕಾಶವನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ ದಾಂಡೇಲಿ ನಗರ ಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.