Friday, May 29, 2026
HomeLocal Newsಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 30ನೇ ವರ್ಷದ ವರ್ಧಂತಿ ಉತ್ಸವ

ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 30ನೇ ವರ್ಷದ ವರ್ಧಂತಿ ಉತ್ಸವ

ಯಲ್ಲಾಪುರ: ಇಲ್ಲಿನ ಗಣೇಶಪುರಂನ ನವಗ್ರಹಸಹಿತ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 30ನೇ ವರ್ಷದ ವರ್ಧಂತಿ ಉತ್ಸವವನ್ನು ಮೇ 5, 2026 (ಮಂಗಳವಾರ)ರಂದು ಅಂಗಾರಕ ಸಂಕಷ್ಟಿ ಅಂಗವಾಗಿ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.

ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ನಡೆಯುವ ಈ ವಿಶೇಷ ಅಂಗಾರಕ ಸಂಕಷ್ಟಿ ಪ್ರಯುಕ್ತ ದಿನಪೂರ್ತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಪೂಜೆಗಳು ಪ್ರಾರಂಭವಾಗಿ, ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರೀ ದೇವರಲ್ಲಿ 108 ಬ್ರಹ್ಮ ಕಲಶಾಭಿಷೇಕ, ಶುದ್ಧಿ ಹೋಮ, ನವಗ್ರಹ ಹವನ, ಗಣಹವನ ಹಾಗೂ ಅಥರ್ವಶೀರ್ಷ ಹವನಗಳು ನೆರವೇರಲಿವೆ.

ಮಧ್ಯಾಹ್ನ ಪೂರ್ಣಾಹುತಿ, ಮಹಾಮಂಗಳಾರತಿ, ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ಭೋಜನ ನಡೆಯಲಿದೆ. ಸಂಜೆ 6ರಿಂದ 8 ಗಂಟೆಯವರೆಗೆ ಭಜನಾ ಕಾರ್ಯಕ್ರಮ ಮತ್ತು ರಾತ್ರಿ 8.30ರಿಂದ 9.30ರವರೆಗೆ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Share