Friday, July 24, 2026
Join WhatsApp Group
HomeLocal Newsಅಳ್ನಾವರ–ದಾಂಡೇಲಿ ನಡುವೆ ಹೊಸ ಡೆಮು ರೈಲು ಸೇವೆ

ಅಳ್ನಾವರ–ದಾಂಡೇಲಿ ನಡುವೆ ಹೊಸ ಡೆಮು ರೈಲು ಸೇವೆ

ಕಾರವಾರ

ಅಳ್ವಾವರ- ದಾಂಡೇಲಿ ನಡುವೆ ಹೊಸ ಡೆಮು ರೈಲಿನ ಸೇವೆಯನ್ನು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಸೋಮಣ್ಣ ಅವರು ಫೆಬ್ರವರಿ 7ರಂದು ಸಂಜೆ 4 ಗಂಟೆಗೆ ದಾಂಡೇಲಿ ರೈಲು ನಿಲ್ದಾಣದಲ್ಲಿ ಉದ್ಘಾಟಿಸಲಿದ್ದಾರೆ.

ಈ ನಿಯಮಿತ ಡೆಮು ರೈಲು ಸೇವೆಗಳು ಫೆಬ್ರವರಿ 9ರಂದು ಕೆಳಗಿನ ಕಾರ್ಯಾಚರಣಾ ವಿವರಗಳೊಂದಿಗೆ ಪ್ರಾರಂಭವಾಗಲಿದ್ದು, ಅಳ್ನಾವರ ಜಂಕ್ಷನ್ ↔ ದಾಂಡೇಲಿ ↔ ಅಳ್ನಾವರ್ ಜಂಕ್ಷನ್ ಮಾರ್ಗದಲ್ಲಿ, ಅಳ್ನಾವರ್ ಜಂಕ್ಷನ್‌ನಿಂದ ದಾಂಡೇಲಿಗೆ ರೈಲು ಸಂಖ್ಯೆ 76501: ಬೆಳಿಗ್ಗೆ 05:30ಕ್ಕೆ ಅಳ್ನಾವರ ಜಂಕ್ಷನ್‌ನಿಂದ ಹೊರಟು ಬೆಳಿಗ್ಗೆ 06:15ಕ್ಕೆ ದಾಂಡೇಲಿ ತಲುಪುತ್ತದೆ. ರೈಲು ಸಂಖ್ಯೆ 76503: ಬೆಳಿಗ್ಗೆ 07:40ಕ್ಕೆ ಅಳ್ನಾವರ್ಜಂಕ್ಷನ್‌ನಿಂದ ಹೊರಟು, ಬೆಳಿಗ್ಗೆ 08:25ಕ್ಕೆ ದಾಂಡೇಲಿ ತಲುಪುತ್ತದೆ. ರೈಲು ಸಂಖ್ಯೆ. 76505: ಸಂಜೆ 07:30ಕ್ಕೆ ಅಳ್ನಾವರ ಜಂಕ್ಷನ್‌ನಿಂದ ಹೊರಟು, ಸಂಜೆ 08:15ಕ್ಕೆ ದಾಂಡೇಲಿ ತಲುಪುತ್ತದೆ.

ದಾಂಡೇಲಿಯಿಂದ ಅಳ್ನಾವರ ಜಂಕ್ಷನ್‌ಗೆ ರೈಲು ಸಂಖ್ಯೆ. 76502: ಬೆಳಿಗ್ಗೆ 06:45ಕ್ಕೆ ದಾಂಡೇಲಿಯಿಂದ ಹೊರಟು, ಬೆಳಿಗ್ಗೆ 07:30ಕ್ಕೆ ಅಳ್ನಾವರ್ ಜಂಕ್ಷನ್ ತಲುಪುತ್ತದೆ. ರೈಲು ಸಂಖ್ಯೆ. 76504: ಬೆಳಿಗ್ಗೆ 08:40ಕ್ಕೆ ದಾಂಡೇಲಿಯಿಂದ ಹೊರಟು, ಬೆಳಿಗ್ಗೆ 09:25ಕ್ಕೆ ಅಳ್ನಾವರ ಜಂಕ್ಷನ್ ತಲುಪುತ್ತದೆ. ರೈಲು ಸಂಖ್ಯೆ. 76506: ಸಂಜೆ 08:30ಕ್ಕೆ ದಾಂಡೇಲಿಯಿಂದ ಹೊರಟು, ಸಂಜೆ 09:15ಕ್ಕೆ ಅಳ್ನಾವರ್ ಜಂಕ್ಷನ್ ತಲುಪುತ್ತದೆ.

4 ಬೋಗಿಗಳ DEMU (2 ಚಾಲನಾ ಪವರ್ ಕಾರುಗಳು + 02 ಟ್ರೇಲರ್ ಕಾರುಗಳು) ವಾರಕ್ಕೆ 6 ದಿನಗಳು (ಭಾನುವಾರ ಹೊರತುಪಡಿಸಿ) ಸಂಚರಿಸಿಲಿದೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share