Friday, March 13, 2026
HomeLocal Newsಮಿರ್ಜಾನ ಕೋಟೆ ರಸ್ತೆಯಲ್ಲಿ ಅಕ್ರಮ ಗೇಟ್ ನಿರ್ಮಾಣ

ಮಿರ್ಜಾನ ಕೋಟೆ ರಸ್ತೆಯಲ್ಲಿ ಅಕ್ರಮ ಗೇಟ್ ನಿರ್ಮಾಣ

ಗ್ರಾಮಸ್ಥರ ಆಕ್ರೋಶ: ಪಂಚಾಯತ್ ಮುಂದೆ ಧರಣಿ ಎಚ್ಚರಿಕೆ

ಕುಮಟಾ: ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಛತ್ರಕೂರ್ವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗೇಟ್ ಅಳವಡಿಸಿ ಟೋಲ್ ಸಂಗ್ರಹಿಸಲು ಮುಂದಾಗಿರುವ ಪಂಚಾಯಿತಿಯ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಗೇಟ್ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸದಿದ್ದರೆ ಪಂಚಾಯತ್ ಕಚೇರಿ ಮುಂದೆ ಧರಣಿ ಕೂರುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮಿರ್ಜಾನ ಕೋಟೆಯ ಕೆಳಭಾಗದಲ್ಲಿರುವ ಛತ್ರಕೂರ್ವೆ ಗ್ರಾಮಕ್ಕೆ ಅನಾದಿಕಾಲದಿಂದಲೂ ಮಿರ್ಜಾನ ಮೂಲಕ ಕೋಟೆಯ ಮಾರ್ಗವಾಗಿ ಸಾಗುವ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆಯು ಲೋಕೋಪಯೋಗಿ ಇಲಾಖೆಯ ಕುಮಟಾ ಉಪವಿಭಾಗದ ಅಡಿಯಲ್ಲಿ ನಿರ್ವಹಣೆಯಲ್ಲಿದೆ. ಆದರೆಇತ್ತೀಚೆಗೆ ಮಿರ್ಜಾನ ಗ್ರಾಮ ಪಂಚಾಯತ್ ಆಡಳಿತ ಸಮಿತಿಯು ಸಭೆ ನಡೆಸಿಪ್ರವಾಸಿ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಉದ್ದೇಶದಿಂದ ಈ ಸಾರ್ವಜನಿಕ ರಸ್ತೆಯಲ್ಲಿ ಟೋಲ್ ಮಾದರಿಯ ಗೇಟ್ ಅಳವಡಿಸಲು ಮುಂದಾಗಿದೆ.

ವ್ಯವಸ್ಥೆಗೆ ತಪ್ಪು ಮಾಹಿತಿ ನೀಡಿಮೇಲಾಧಿಕಾರಿಗಳ ನಿರ್ದೇಶನವೆಂದು ಸುಳ್ಳು ಹೇಳಿ ಗೇಟ್ ನಿರ್ಮಿಸಲಾಗುತ್ತಿದೆ.ಗೇಟ್ ಅಳವಡಿಕೆಯಿಂದ ಛತ್ರಕೂರ್ವೆ ಗ್ರಾಮದ ನಿವಾಸಿಗಳಿಗೆನಿತ್ಯ ಓಡಾಡುವ ವಿದ್ಯಾರ್ಥಿಗಳಿಗೆ ಹಾಗೂ ತುರ್ತು ವಾಹನಗಳಿಗೆ ಸಂಚರಿಸಲು ಅಡ್ಡಿಯಾಗುತ್ತದೆ.ಕೃತಕವಾಗಿ ವಾಹನ ದಟ್ಟಣೆ ಸೃಷ್ಟಿಸುವುದರಿಂದ ಈ ಕಿರಿದಾದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಪ್ರವಾಸಿಗರಿಗೆ ಶೌಚಾಲಯಸ್ವಚ್ಛತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಶುಲ್ಕ ಸಂಗ್ರಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆಸಾರ್ವಜನಿಕ ರಸ್ತೆಗೆ ಗೇಟ್ ಹಾಕಿ ಗ್ರಾಮಸ್ಥರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಗ್ರಾಮಸ್ಥರು ವಾದಿಸಿದ್ದಾರೆ.

ಈ ಕುರಿತು ಛತ್ರಕೂರ್ವೆ ಗ್ರಾಮದ 50ಕ್ಕೂ ಹೆಚ್ಚು ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ವಿನಾಯಕ ಪಟಗಾರ, ಗೇಟ್ ಹಾಕುವುದರಿಂದ ಗ್ರಾಮದ ಜನಜೀವನಕ್ಕೆ ತೊಂದರೆಯಾಗುತ್ತದೆ. ಕೂಡಲೇ ಈ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಇನ್ನೋರ್ವ ಮುಖಂಡ ಶಿವಾನಂದ ಮಾತನಾಡಿ, ಒಂದೊಮ್ಮೆ ಪಂಚಾಯತ್ ಹಠಮಾರಿ ಧೋರಣೆ ಮುಂದುವರಿಸಿದರೆ ಗ್ರಾಮಸ್ಥರೆಲ್ಲರೂ ಸೇರಿ ಪಂಚಾಯತ್ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ”ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರವಿಚೆನ್ನಪ್ಪಲೋಕೇಶಪುರಸಯ್ಯಗಣೇಶನವೀನಓಮುಮಹೆಂದ್ರ ಶಾಂತಿದಾಮೋದರಲಕ್ಷಮಣಗುರುನಾಥರಾಮಚಂದ್ರ ವೆಂಕಟ್ರಮಣ ಹಾಗೂ ಪಂಚಾಯತ್ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share