Friday, July 24, 2026
Join WhatsApp Group
HomeCrimeಜೀವನದಲ್ಲಿ ಜಿಗುಪ್ಸೆ; ಹೆಂಡತಿಯೊಂದಿಗೆ ವಿ*ಷ ಸೇವಿಸಿದ!

ಜೀವನದಲ್ಲಿ ಜಿಗುಪ್ಸೆ; ಹೆಂಡತಿಯೊಂದಿಗೆ ವಿ*ಷ ಸೇವಿಸಿದ!

ಯಲ್ಲಾಪುರ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ವಿ*ಷ ಸೇವನೆ ಮಾಡಿ ಆತ್ಯ**ಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರದ ಉಮ್ಮಚಗಿಯಲ್ಲಿ ವರದಿಯಾಗಿದೆ.

ಮೃ-ತನಾದ ನಾಗೆಂದ್ರ ರಾಮಣ್ಣ ಬೋವಿವಡ್ಡರ (26 ವರ್ಷ) ಉಮ್ಮಚಗಿ ವ್ಯಾಪ್ತಿಯ ಸಂಕದಗುಂಡಿಯಲ್ಲಿ ವಾಸವಾಗಿದ್ದ. ಈತ ಕೆಲದಿನಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಗುಪ್ಸೆಗೊಂಡಿದ್ದ.

ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಸಂಕದಗುಂಡಿ ಊರಿನ ತನ್ನ ಮನೆಯಲ್ಲಿ ಫೆ. 7ರಂದು ಬೆಳಗಿನ ಜಾವ 1 ಗಂಟೆಯ ಹೊತ್ತಿಗೆ ತನ್ನ ಹಂಡತಿ ನಮತಾಳೊಂದಿಗೆ ಸೇರಿ ವಿ*ಷ ಸೇವನೆ ಮಾಡಿದ್ದ. ಚಿಕಿತ್ಸೆಗಾಗಿ ಶಿರಸಿ ಟಿ.ಎಸ್.ಎಸ್ ಆಸ್ಪತ್ರೆಗೆ ದಾಖಲು ಮಾಡಿ ಅಲ್ಲಿಂದ ನಾಗೆಂದ್ರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ದೇರಳಕಟ್ಟೆಯ ಏನಪೋಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಫಲಕಾರಿಯಾಗದೆ ಫೆ.11ರಂದು ಮದ್ಯಾಹ್ನ 2.27ರ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾನೆ.

ಸಮಸ್ಯೆ ಯಾವುದೇ ಇರಲಿ, ತಾಳ್ಮೆಯಿಂದ ಯೋಚಿಸಿ ಹೆಜ್ಜೆಯಿಡಿ. ಆತ್ಮಹತ್ಯೆ ಮಹಾಪಾಪ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share