Friday, March 13, 2026
HomeLocal Newsಮನೆಗೆ ಹೋಗುತ್ತೇನೆಂದವ ನಾಪತ್ತೆ

ಮನೆಗೆ ಹೋಗುತ್ತೇನೆಂದವ ನಾಪತ್ತೆ

ಕಾರವಾರ: ಹೊನ್ನಾವರದ ಕರ್ಕಿಕೋಡಿಯ ಆದಿತ್ಯ ಗೌರೀಶ ಭಂಡಾರಿ (22 ವರ್ಷ) ಈತ ಫೆ. 7ರಂದು ಅಂಕೋಲಾ ಹಾರವಾಡದ ಪುತ್ತುವಾಡದಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದು ಉಳಿದುಕೊಂಡಿದ್ದವನು. ಫೆ. 8ರಂದು ಸಂಜೆ 4 ಗಂಟೆಯ ಸುಮಾರಿಗೆ ಹೊನ್ನಾವರಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವನು ಇದೂವರೆಗೂ ಪತ್ತೆಯಾಗಿಲ್ಲ.

ಕಾಣೆಯಾದ ವ್ಯಕ್ತಿಯ ಚಹರೆ: ಗೋಧಿ ಮೈಬಣ್ಣ, ಉದ್ದನೆಯ ಮುಖ, ತೆಳ್ಳಗಿನ ಮೈಕಟ್ಟು, 6.2 ಅಡಿ ಎತ್ತರ, ತಳಿ ನೀಲಿ ಬಣ್ಣದ ಪೂರ್ತಿ ತೋಳಿನ ಚಕ್ಸ್ ಶರ್ಟ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಕನ್ನಡ, ಕೊಂಕಣಿ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಬಲಗೈ ಮುಂಗೈಗೆ ಕಪ್ಪು ಎಳ್ಳು ಕಲೆ ಮತ್ತು ಹಣೆಯ ಮೇಲೆ ಹಳೆಯ ಗಾಯದ ಕಲೆ ಇರುತ್ತದೆ.

ಇವರು ಸಾರ್ವಜನಿಕರಿಗೆ ಕಂಡುಬಂದಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ-08388-220333, ಮೊಬೈಲ್ ಸಂಖ್ಯೆ -9480805250/9480805268 ಇ-ಮೇಲ್ ankolakwr@ksp.gov.inಗೆ ಸಂಪರ್ಕಿಸುವಂತೆ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share