Monday, September 7, 2026
Join WhatsApp Group
HomeLocal Newsಮಹಿಳೆಯರಿಗೆ ಉದ್ಯಮದ ಹೊಸ ಹೆಜ್ಜೆ; 10 ದಿನಗಳ ತರಬೇತಿ

ಮಹಿಳೆಯರಿಗೆ ಉದ್ಯಮದ ಹೊಸ ಹೆಜ್ಜೆ; 10 ದಿನಗಳ ತರಬೇತಿ

ಅಂಕೋಲಾ: ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಅಂಕೋಲಾ ತಾಲೂಕಿನ ಸಾಮಾನ್ಯ ವರ್ಗದ ಮಹಿಳೆಯರಿಗೆ ಉದ್ಯಮಶೀಲತೆಯ ಕುರಿತು ತರಬೇತಿ ನೀಡಲು 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯತ್ ಕಾರವಾರ ಹಾಗೂ ತಾಲೂಕು ಪಂಚಾಯತ್‌ನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ), ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಆ.31ರಿಂದ ಸೆ.9ರವರೆಗೆ ಸಾಮರ್ಥ್ಯ ಸೌಧ, ತಾಲೂಕು ಪಂಚಾಯತ್, ಅಂಕೋಲಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ತರಬೇತಿಯಲ್ಲಿ ಸಾಧನಾ ಪ್ರೇರಣೆ, ಉದ್ಯಮಶೀಲರ ಸಾಮರ್ಥ್ಯ ಗುರುತಿಸುವಿಕೆ, ವ್ಯವಸ್ಥಾಪನಾ ಕೌಶಲ್ಯ, ಹೊಸ ಉದ್ಯಮ ಆರಂಭಿಸುವ ಅವಕಾಶಗಳು, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಲೆಕ್ಕಪತ್ರ ನಿರ್ವಹಣೆ, ಮಾರಾಟ ತಂತ್ರಗಳು, ಸರ್ಕಾರದ ಯೋಜನೆಗಳು ಹಾಗೂ ಬ್ಯಾಂಕ್‌ಗಳ ಪಾತ್ರ ಸೇರಿದಂತೆ ಉದ್ಯಮ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಲು ಅಗತ್ಯವಾದ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಇದರ ಜೊತೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಿಗೆ ಒಂದು ದಿನ ಭೇಟಿ ನೀಡಿ, ಉದ್ಯಮಗಳ ಮಾಲೀಕರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶವನ್ನೂ ಕಲ್ಪಿಸಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

ಉದ್ಯಮ ಆರಂಭಿಸಲು ಉತ್ಸುಕರಾಗಿರುವ ಅಂಕೋಲಾ ತಾಲೂಕಿನ ಸಾಮಾನ್ಯ ವರ್ಗದ 18ರಿಂದ 45 ವರ್ಷ ವಯಸ್ಸಿನ, ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆಸಕ್ತರು ಆ.30ರೊಳಗಾಗಿ ಉಪ ನಿರ್ದೇಶಕರು, ಸಿಡಾಕ್, ಶಿರವಾಡ, ಕಾರವಾರ ಅವರಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಾರವಾರ ಸಿಡಾಕ್ ಉಪ ನಿರ್ದೇಶಕ ಶಿವಾನಂದ ವೆಂ. ಎಲಿಗಾರ-9448812974 ಹಾಗೂ ತರಬೇತುದಾರರಾದ ಪ್ರತಿಭಾ ಹೆಳವಿ-9353119412 ಅವರನ್ನು ಸಂಪರ್ಕಿಸಬಹುದು ಎಂದು ಸಿಡಾಕ್ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share