Sunday, September 6, 2026
Join WhatsApp Group
HomeLocal Newsಕಾರವಾರ | ನೇವಲ್ ಬೇಸ್‌ನಿಂದ ಇನ್ನೋರ್ವ ಉದ್ಯೋಗಿ ನಾಪತ್ತೆ!

ಕಾರವಾರ | ನೇವಲ್ ಬೇಸ್‌ನಿಂದ ಇನ್ನೋರ್ವ ಉದ್ಯೋಗಿ ನಾಪತ್ತೆ!

ಕಾರವಾರ: ನೇವಲ್ ಬೇಸ್‌ನಲ್ಲಿ ಸಿವಿಲಿಯನ್ ಉದ್ಯೋಗಿಯಾಗಿರುವ 37 ವರ್ಷದ ಮನೋಜ್ ರೀಪು ನಾಯ್ಕ ಅವರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕಾರವಾರ ಶಹರ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಕಾರವಾರ ತಾಲೂಕಿನ ನಾರಗೇರಿ, ಶಿರವಾಡ ನಿವಾಸಿಯಾಗಿರುವ ಮನೋಜ್ ರೀಪು ನಾಯ್ಕ ಅವರು ಆಗಸ್ಟ್ 26ರಂದು ಬೆಳಗ್ಗೆ ಸುಮಾರು 5 ಗಂಟೆಗೆ ಕಾರವಾರದ ದೇವಳಿವಾಡದಿಂದ ಅಂಕೋಲಾ ತಾಲೂಕಿನ ಬಾಳೆಗುಳಿಯಲ್ಲಿ ಸ್ವಲ್ಪ ಕೆಲಸವಿದೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ಆದರೆ ಬಳಿಕ ಯಾರಿಗೂ ಮಾಹಿತಿ ನೀಡದೆ ಮನೆಗೆ ಮರಳಿಲ್ಲ. ಹಲವು ದಿನಗಳಿಂದ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ.

ನಾಪತ್ತೆಯಾಗಿರುವ ವ್ಯಕ್ತಿಯು ಬಿಳಿ ಗೋಧಿ ಬಣ್ಣದ ಮೈಬಣ್ಣ, ದುಂಡನೆಯ ಮುಖ, ಸಾಧಾರಣ ತೆಳ್ಳನೆಯ ಮೈಕಟ್ಟು ಹಾಗೂ ಸುಮಾರು 6 ಅಡಿ ಎತ್ತರ ಹೊಂದಿದ್ದಾರೆ. ಮನೆಯಿಂದ ತೆರಳುವ ಸಂದರ್ಭದಲ್ಲಿ ಬಿಳಿ ಬಣ್ಣದ ಪುಲ್‌ ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಅವರು ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ.

ಈ ಚಹರೆಯುಳ್ಳ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಕಾರವಾರ ಶಹರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಕಾರವಾರ ಶಹರ ಪೊಲೀಸ್ ಠಾಣೆ: 9480805230
ಕಾರವಾರ ಪೊಲೀಸ್ ಉಪನಿರೀಕ್ಷಕರು: 08382-226333

ನಾಪತ್ತೆಯಾಗಿರುವ ಮನೋಜ್ ರೀಪು ನಾಯ್ಕ ಅವರ ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಕಾರವಾರ ಶಹರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಆಗಸ್ಟ್‌ 27ರಿಂದ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್‌ ಕುಮಾರ್‌ ಎಂಬುವವರು ನಾಪತ್ತೆಯಾಗಿದ್ದು, ಇದುವರೆಗೂ ಅವರ ಕುರಿತಾದ ಯಾವುದೇ ಮಾಹಿತಿ ಲಭ್ಯವಾಗದಿರುವುದು ನಿಗೂಢವಾಗಿಯೇ ಉಳಿದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share