Friday, March 13, 2026
HomeStateದೇವಸ್ಥಾನಗಳಲ್ಲಿ  ಚಿತ್ರೀಕರಣಕ್ಕೂ ಶುಲ್ಕ!

ದೇವಸ್ಥಾನಗಳಲ್ಲಿ  ಚಿತ್ರೀಕರಣಕ್ಕೂ ಶುಲ್ಕ!

ಬೆಂಳೂರು: ಇನ್ನು ಮುಂದೆ ರಾಜ್ಯದ ‘ಎ’ ಹಾಗೂ ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಯಾವುದೇ ಚಿತ್ರೀಕರಣ ಮಾಡಬೇಕಾದರೂ ಮುಂಚಿತ ಅನುಮತಿ ಪಡೆದು ನಿಗದಿತ ಶುಲ್ಕ ಪಾವತಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ, ವಾಣಿಜ್ಯ ಉದ್ದೇಶದ ವಿಡಿಯೋಗಳು ಹಾಗೂ ಸುದ್ದಿ ವಾಹಿನಿಗಳ ಚಿತ್ರೀಕರಣಕ್ಕೂ ಈ ನಿಯಮ ಅನ್ವಯವಾಗಲಿದೆ. ಇದರ ಅನುಷ್ಠಾನವನ್ನು ಮುಜರಾಯಿ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ.

ಶುಲ್ಕ ಎಷ್ಟು?

  • ಬೆಂಗಳೂರು ನಗರದ ದೇವಸ್ಥಾನಗಳಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ–15,000 ರೂ.
  • ಇತರೆ ಪ್ರದೇಶಗಳ ದೇವಸ್ಥಾನಗಳಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ – 10,000 ರೂ.
  • ಧಾರಾವಾಹಿ / ಸಾಕ್ಷ್ಯಚಿತ್ರ / ವಾಣಿಜ್ಯ ಉದ್ದೇಶದ ಚಿತ್ರೀಕರಣಕ್ಕೆ – ದಿನಕ್ಕೆ 5,000 ರೂ.
  • ನ್ಯೂಸ್ ಚಾನೆಲ್‌ಗಳಿಗೆ (ಕ್ಷೇತ್ರದ ಮಹಿಮೆ ಸಾರುವ, 5 ನಿಮಿಷಗಳೊಳಗಿನ ಚಿತ್ರೀಕರಣಕ್ಕೆ) – 250 ರೂ.
  • 5 ನಿಮಿಷ ಮೀರಿದರೆ – ಗಂಟೆಗಳ ಆಧಾರದಲ್ಲಿ ಹೆಚ್ಚುವರಿ ಶುಲ್ಕ

ಈ ನೀತಿ ಹೊಸದೇನಲ್ಲ. 2003 ಹಾಗೂ 2012ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಆದರೆ ಚಿತ್ರೀಕರಣಕ್ಕೆ ಶುಲ್ಕ ಕಟ್ಟಬೇಕು ಎಂಬ ಮಾಹಿತಿ ಬಹುತೇಕರಿಗೆ ತಿಳಿದಿರಲಿಲ್ಲ. ಹೀಗಾಗಿ ದೇವಾಲಯಗಳ ಪಾವಿತ್ರ್ಯತೆ ಹಾಗೂ ಶಿಸ್ತು ಕಾಪಾಡುವ ಉದ್ದೇಶದಿಂದ 2012ರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇಲಾಖೆ ಮುಂದಾಗಿದೆ.

ಮುಜರಾಯಿ ಇಲಾಖೆ 15 ಅಂಶಗಳ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಅನುಮತಿ ಪಡೆಯದೆ ಚಿತ್ರೀಕರಣ ಮಾಡಿದರೆ ಮೊಬೈಲ್ ಅಥವಾ ಕ್ಯಾಮೆರಾದಲ್ಲಿನ ದೃಶ್ಯಗಳನ್ನು ಅಳಿಸಿ ಸಾಧನವನ್ನು ಹಿಂದಿರುಗಿಸಲಾಗುವುದು ಎಂದು ಎಚ್ಚರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share