Friday, July 24, 2026
Join WhatsApp Group
HomeOthersʻಅಲ್ಫಾ ́ಮೂಲಕ ವಿಶ್ವಾಸ ಮೂಡಿಸಿದ ಹೇಮಂತ್‌ ಕುಮಾರ್

ʻಅಲ್ಫಾ ́ಮೂಲಕ ವಿಶ್ವಾಸ ಮೂಡಿಸಿದ ಹೇಮಂತ್‌ ಕುಮಾರ್

ಆಲ್ಫಾ ಅಂದರೇನೇ ಡಾಮಿನೇಶನ್. ಈ ವಾರ ತೆರೆಕಂಡ ಆಲ್ಫಾ ಚಿತ್ರದಲ್ಲಿ ಅದನ್ನೇ ಸಾಬೀತುಪಡಿಸಿರುವವರು ನಾಯಕ ಹೇಮಂತ್ ಕುಮಾರ್. ಮೊದಲ ಸಿನಿಮಾದಲ್ಲೇ ಆತ್ಮವಿಶ್ವಾಸದ ನಟನೆ, ಮೈಕಟ್ಟು ಮತ್ತು ಆ್ಯಕ್ಷನ್ ಪ್ರೆಸೆನ್ಸ್ ಮೂಲಕ ಅವರು ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಾರೆ.

ಚಿಕ್ಕ ವಯಸ್ಸಿನಿಂದಲೇ ಸಿನಿಮಾ ನಾಯಕನಾಗಬೇಕೆಂಬ ಕನಸು ಕಂಡಿದ್ದ ಹೇಮಂತ್, ಅದನ್ನು ನಿಜವಾಗಿಸಿಕೊಳ್ಳಲು ಅಗತ್ಯವಿದ್ದ ಹಾರ್ಡ್ ವರ್ಕ್‌ನ್ನು ಕೈಬಿಟ್ಟಿಲ್ಲ. ಫೈಟ್, ಡಾನ್ಸ್, ಬಾಡಿ ಟ್ರಾನ್ಸ್‌ಫರ್ಮೇಶನ್—ಎಲ್ಲದರಲ್ಲೂ ತಯಾರಿ ಮಾಡಿಕೊಂಡು ಬಂದಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಆ್ಯಕ್ಷನ್ ಹೀರೋ ಆಗಬೇಕಾದರೆ ಫಿಟ್ ಆಗಿರಬೇಕು ಎಂಬ ದೃಢ ನಿರ್ಧಾರದಿಂದ ದೇಹಸೌಷ್ಟವದತ್ತ ವಿಶೇಷ ಗಮನ ಹರಿಸಿದ್ದು, ಮೊದಲ ನೋಟದಲ್ಲೇ ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಚಿತ್ರದ ಸಾಹಸ ದೃಶ್ಯಗಳನ್ನು ತೆಲುಗಿನ ಖ್ಯಾತ ಸಾಹಸ ನಿರ್ದೇಶಕ ವಿಜಯ್‌ ಮಾಸ್ಟರ್ ಅದ್ಭುತವಾಗಿ ರೂಪಿಸಿದ್ದಾರೆ. ಕೆಲ ದೃಶ್ಯಗಳಲ್ಲಿ ಕೈ ಮೇಲೆ ನಿಜವಾಗಿಯೂ ಬೆಂಕಿ ಹಚ್ಚಿ ನಟಿಸಿರುವ ಸಾಹಸ ಮನೋಭಾವ ಚಿತ್ರಕ್ಕೆ ಹೆಚ್ಚುವರಿ ತೂಕ ನೀಡಿದೆ. ಆದರೆ ಚಿತ್ರದ ಯಶಸ್ಸಿಗೆ ತಾನೊಬ್ಬನೇ ಕಾರಣವಲ್ಲ ಎಂದು ವಿನಯದಿಂದ ಹೇಳುವ ಹೇಮಂತ್ ಅವರ ಮಾತು ಗಮನಾರ್ಹ.

ಚಿತ್ರದ ವೇಗದ ಕಥಾನಕವೇ ಪ್ರೇಕ್ಷಕರನ್ನು ಸೆಳೆಯುವ ಪ್ರಮುಖ ಅಂಶ. ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್‌ ಮಹೇಶ್‌ ಖಳನಾಯಕನಾಗಿ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ಅಚ್ಯುತ್‌ ಕುಮಾರ್‌, ಅವಿನಾಶ್‌, ರಮೇಶ್‌ ಇಂದಿರಾ ಸೇರಿದಂತೆ ಭರ್ಜರಿ ತಾರಾಗಣ ಚಿತ್ರಕ್ಕೆ ಬಲವಾಗಿದೆ. ಕೆಜಿಎಫ್, ಕಾಂತಾರ ತರಹ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರ ಉಪಸ್ಥಿತಿಯೂ ಚಿತ್ರಕ್ಕೆ ಮೌಲ್ಯ ಹೆಚ್ಚಿಸಿದೆ.

ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾದಾಗಲೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೆಲುಗು ವಿತರಕರು ಸ್ವಯಂಪ್ರೇರಿತವಾಗಿ ಡಬ್ಬಿಂಗ್ ಹಕ್ಕುಗಳಿಗಾಗಿ ಸಂಪರ್ಕಿಸಿರುವುದು ಚಿತ್ರದ ಮೇಲೆ ಇರುವ ನಂಬಿಕೆಯನ್ನು ತೋರಿಸುತ್ತದೆ. ಒಟ್ಟಿನಲ್ಲಿ ಆಲ್ಫಾ ಮೂಲಕ ಕನ್ನಡ ಚಿತ್ರರಂಗಕ್ಕೆ ಒಬ್ಬ ಹೊಸ ಆ್ಯಕ್ಷನ್ ಹೀರೋ ಎಂಟ್ರಿಯಾಗಿದ್ದು, ಹೇಮಂತ್ ಕುಮಾರ್ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಡಾಮಿನೇಟ್ ಮಾಡುವ ಸಾಧ್ಯತೆಯನ್ನು ಮೂಡಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share