ಯಲ್ಲಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ದೇವರಗದ್ದೆ ಬೂತ್‌ನ ವತಿಯಿಂದ ತೊಂಡೆಕೆರೆ ಹಾಲಿನ ಡೈರಿ ಆವರಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ನರೇಂದ್ರ ಮೋದಿ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಅವರ ಭಾವಚಿತ್ರದ ಮುಂದೆ 76 ಮಣ್ಣಿನ ಹಣತೆಗಳನ್ನು ಬೆಳಗಿಸಿದರು.
ಇದಕ್ಕೂ ಮುನ್ನ ಬೂತ್‌ನ ಕಾರ್ಯಕರ್ತರು ಹಾಗೂ ಹಿತೈಷಿಗಳು ತಮ್ಮ ಮನೆಗಳ ಮುಂಭಾಗ ಮತ್ತು ತುಳಸಿ ಕಟ್ಟೆಯ ಬಳಿ ದೀಪಗಳನ್ನು ಬೆಳಗಿಸುವಂತೆ ಕರೆ ನೀಡಲಾಗಿತ್ತು. ಬಳಿಕ ಸಂಜೆ ತೊಂಡೇಕೆರೆ ಡೈರಿ ಆವರಣದಲ್ಲಿ ಎಲ್ಲರೂ ಒಂದೆಡೆ ಸೇರಿ ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ತಿಮ್ಮಣ್ಣ ಭಟ್ ಘಟ್ಟಿ, ನರಸಿಂಹ ಭಟ್ ಕುಂಕಿಮನೆ, ದತ್ತಾತ್ರೇಯ ಹೆಗಡೆ ಹೆಗ್ಗುಂಬಳಿ, ಮಂಜುನಾಥ ಭಾಗ್ವತ್ ದಂತಳಿಗೆ, ಶ್ರೀಧರ ಹೆಗಡೆ ಕಣ್ಣಿಜಡ್ಡಿ, ಗೋಪಾಲಕೃಷ್ಣ ಹೆಗಡೆ ತೊಂಡೇಕೆರೆ, ರಾಮಕೃಷ್ಣ ಭಾಗ್ವತ್ ದಂತಳಿಗೆ, ನಾರಾಯಣ ಭಟ್ ತೆಂಗಿನಜಡ್ಡಿ, ಪ್ರಶಾಂತ ನಾಯ್ಕ, ಶ್ರೀಧರ ಹೆಗಡೆ ಹಾದಿಮನೆ, ಬಾಲಚಂದ್ರ ಭಟ್ ಭಟ್ರಕೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.