Friday, October 23, 2026
HomeCrimeಯಲ್ಲಾಪುರ | ಇಸ್ಪೀಟ್ ಜೂಜಾಟ: ಐವರು ವಶಕ್ಕೆ, ಓರ್ವ ಪರಾರಿ

ಯಲ್ಲಾಪುರ | ಇಸ್ಪೀಟ್ ಜೂಜಾಟ: ಐವರು ವಶಕ್ಕೆ, ಓರ್ವ ಪರಾರಿ

ಯಲ್ಲಾಪುರ: ಪಟ್ಟಣದ ಮಂಜುನಾಥನಗರದ ಖಾಲಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ 4,050 ರೂ ನಗದು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆ.20ರಂದು ಸಂಜೆ 6 ಗಂಟೆ ಸುಮಾರಿಗೆ ಮಂಜುನಾಥನಗರದ ಸಹ್ಯಾದ್ರಿ ಕೋ-ಆಪರೇಟಿವ್ ಸೊಸೈಟಿ ಹಿಂಭಾಗದ ಖುಲ್ಲಾ ಜಾಗದಲ್ಲಿ ಕೆಲವರು ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಯಲ್ಲಾಪುರದ ಮಂಜುನಾಥನಗರದ ದಶರಥ ರಾಯಪ್ಪ ಮಾಚಕನವರ (41), ಗಣೇಶ ಹನುಮಂತ ಕಟ್ಟಿಮನೆ (40) ಹಾಗೂ ಜಾನ್ಸನ್ ಚಿನ್ನಪ್ಪ ಇನ್ಯಪ್ಪನವರ (38), ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯ ರಾಜೇಶ ಮಾಣಿಕ್ಯ ಮೊದಲಿಯಾರ (37) ಮತ್ತು ಪಟ್ಟಣದ ಎಲ್‌ಐಸಿ ಕಚೇರಿ ಬಳಿಯ ನಿವಾಸಿ ಮಂಜುನಾಥ ಅನಂತ ಬೋವಿವಡ್ಡರ (39) ಸಿಕ್ಕಿಬಿದ್ದಿದ್ದಾರೆ. ಇದೇ ವೇಳೆ 6ನೇ ಆರೋಪಿ, ತೇಲಂಗಾರದ ಬಸವರಾಜ ಫಕೀರಪ್ಪ ಕಟ್ಟಿಮನಿ ಎಂಬಾತ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಾಳಿಯ ವೇಳೆ ಆರೋಪಿಗಳಿಂದ ಹಾಗೂ ಜೂಜಾಟದ ಸ್ಥಳದಲ್ಲಿದ್ದ ಮಂಡದ ಮೇಲಿನಿಂದ ಒಟ್ಟು 4,050 ರೂ ನಗದು ಹಣ ಮತ್ತು ಜೂಜಾಟದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡ ಬಳಿಕ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share