Friday, October 23, 2026
HomeCrimeಗೋಕರ್ಣ | ಅಕೇಶಿಯಾ ಕಟ್ಟಿಗೆ ವಿಚಾರಕ್ಕೆ ಮಾರಾಮಾರಿ

ಗೋಕರ್ಣ | ಅಕೇಶಿಯಾ ಕಟ್ಟಿಗೆ ವಿಚಾರಕ್ಕೆ ಮಾರಾಮಾರಿ

ಗೋಕರ್ಣ: ಜಮೀನಿನಲ್ಲಿ ಕಡಿದಿದ್ದ ಅಕೇಶಿಯಾ ಮರದ ತುಂಡುಗಳನ್ನು ತೆಗೆದುಕೊಂಡು ಹೋಗುವ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಟ್ಟಿಗೆಯ ತುಂಡಿನಿಂದ ತಲೆ ಹಾಗೂ ಬೆನ್ನಿಗೆ ಹೊಡೆದು ಹಲ್ಲೆ ನಡೆಸಿದ ಆರೋಪದಡಿ ಐವರ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿದ್ರಿಗೇರಿ ಗ್ರಾಮದ ರಾಯಪ್ಪ ಬೀರಾ ಗೌಡ (48) ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಜಮೀನಿನಲ್ಲಿ ಕಡಿದ ಅಕೇಶಿಯಾ ಕಟ್ಟಿಗೆ ತುಂಡುಗಳನ್ನು ಆರೋಪಿತರಾದ ಬಾವಿಕೊಡ್ಲ ಗ್ರಾಮದ ರವಿ ಮಾದೇವ ಗೌಡ, ನವೀನ್ ಮಾದೇವ ಗೌಡ, ಚಂದ್ರು ಓಮು ಗೌಡ, ಮಂಜು ಓಮು ಗೌಡ ಹಾಗೂ ಮಾದೇವ ಹೊನ್ನು ಗೌಡ ಒಡೆಯುತ್ತಿದ್ದರು. ಈ ವೇಳೆ ರಾಯಪ್ಪ ಅವರು ತಾವು ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಬಂದು ಪರಿಶೀಲಿಸಿ ಏನು ಮಾಡಬೇಕೆಂದು ತಿಳಿಸುತ್ತಾರೋ ಅದರಂತೆ ಮರದ ತುಂಡುಗಳನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಈ ಐವರೂ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಬಳಿಕ ಎಲ್ಲರೂ ಸೇರಿ ಕೈಯಲ್ಲಿದ್ದ ಕಟ್ಟಿಗೆಯ ತುಂಡಿನಿಂದ ರಾಯಪ್ಪ ಅವರ ತಲೆ ಹಾಗೂ ಬೆನ್ನಿಗೆ ಹೊಡೆದಿದ್ದಲ್ಲದೆ, ಕೈಯಿಂದಲೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟಕ್ಕೆ ನಿಲ್ಲದೆ, ಮತ್ತೆ ತಮ್ಮ ತಂಟೆ-ತಕರಾರಿಗೆ ಬಂದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share