ಭಟ್ಕಳ: ದೇವಸ್ಥಾನದ ಬಾಗಿಲಿನ ಬೀಗ ಹಾಗೂ ಕಟ್ಟಿಗೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೇವರ ಕುತ್ತಿಗೆಯಲ್ಲಿದ್ದ ಸುಮಾರು ರೂ.60 ಸಾವಿರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕೆಯ ಗರಡಿಹಿತ್ಲು ಗ್ರಾಮದಲ್ಲಿ ನಡೆದಿದೆ.
ಸೆ.28ರ ರಾತ್ರಿ 10 ಗಂಟೆಯಿಂದ ಸೆ.29ರ ಬೆಳಗಿನ ಜಾವ 5 ಗಂಟೆಯ ನಡುವಿನ ಅವಧಿಯಲ್ಲಿ ಬೆಳಕೆ, ಗರಡಿಹಿತ್ಲು ಗ್ರಾಮದ ಶ್ರೀ ಭಂಟಗೊಂಡ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ ಎಂದು 67 ವರ್ಷದ ಕೂಲಿ ಕಾರ್ಮಿಕ ಮಂಜಪ್ಪ ಬಡಿಯಾ ನಾಯ್ಕ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರರ ಪ್ರಕಾರ, ಯಾರೋ ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಹಾಗೂ ಕಟ್ಟಿಗೆಯ ಬಾಗಿಲನ್ನು ಮುರಿದು ಒಳನುಗ್ಗಿ, ದೇವರ ಕುತ್ತಿಗೆಯಲ್ಲಿದ್ದ ಒಟ್ಟು ಸುಮಾರು ರೂ.60 ಸಾವಿರ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


