Friday, October 23, 2026
HomeCrimeದಂಪತಿ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ

ದಂಪತಿ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ

ಕುಮಟಾ: ಪ್ರೀತಿಸಿ ಮದುವೆಯಾದ ವಿಚಾರ ಹಾಗೂ ಟೂರಿಸ್ಟ್ ಬೋಟ್‌ ವಿಷಯಕ್ಕೆ ಸಂಬಂಧಿಸಿದಂತೆ ಸಿಟ್ಟಿನಿಂದ ಬಂದ ನಾಲ್ವರು ವ್ಯಕ್ತಿಗಳು ಮನೆಯ ಬಳಿ ಗಲಾಟೆ ನಡೆಸಿ ದಂಪತಿ ಹಾಗೂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾ ತಾಲೂಕಿನ ಮಾಸೂರು ಕ್ರಾಸ್ ಜನತಾ ಪ್ಲಾಟ್ ನಿವಾಸಿ ಪಲ್ಲವಿ ಕಾರ್ತಿಕ ಹರಿಕಾಂತ ಅವರು ನೀಡಿದ ದೂರಿನಂತೆ, ಸೆ.16ರಂದು ರಾತ್ರಿ ಸುಮಾರು 9 ಗಂಟೆಗೆ ಆರೋಪಿಗಳಾದ ಮೂಡಂಗಿ-ತದಡಿ ನಿವಾಸಿಗಳಾದ ಸಾತ್ವಿಕ ವಿನಾಯಕ ಹರಿಕಂತ್ರ, ಹೃತೀಕ್‌ ವಿನಾಯಕ ಹರಿಕಂತ್ರ, ಹಿಚ್ಕಡ-ಅಂಕೋಲಾ ನಿವಾಸಿ ವಿಕಾಸ ಕೃಷ್ಣ ಹರಿಕಂತ್ರ ಹಾಗೂ ಬಂಗ್ಲೆಗುಡ್ಡ-ಗೋಕರ್ಣ ನಿವಾಸಿ ಮೂರ್ತಿ ಎಂಬುವರು ಕಾರು ಸಂಖ್ಯೆ ಕೆಎ-55/ಎಂ-7900ರಲ್ಲಿ ಪಲ್ಲವಿ ಅವರ ಮನೆಯ ಮುಂದಿನ ಅಂಗಳದ ಬಳಿ ಬಂದಿದ್ದರು.

ಪಲ್ಲವಿ ಅವರು ಕಾರ್ತಿಕ ಅವರನ್ನು ಪ್ರೀತಿಸಿ ಮದುವೆಯಾಗಿರುವ ವಿಚಾರ ಹಾಗೂ ಟೂರಿಸ್ಟ್ ಬೋಟ್‌ ವಿಷಯಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪಲ್ಲವಿ ಹಾಗೂ ಅವರ ಪತಿ ಕಾರ್ತಿಕ ಹರಿಕಾಂತ ಅವರ ಮೇಲೆ ಸಿಟ್ಟಿನಿಂದ ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಯ ಬಳಿ ಬಂದ ಆರೋಪಿಗಳು ಕಾರ್ತಿಕ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಲ್ಲದೆ, ಕಾಲು ಹಿಡಿದು ಎತ್ತಿಕೊಂಡು ಕಾರಿನಲ್ಲಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಹಲ್ಲೆ ಬಿಡಿಸಲು ಬಂದ ಪಲ್ಲವಿ ಅವರನ್ನು ಹೃತೀಕ್ ಎದೆಗೆ ಕೈ ಹಾಕಿ ದೂಡಿ ಅವಮಾನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೇ, ಸಾತ್ವಿಕ ಎಂಬಾತ ಪಲ್ಲವಿ ಅವರ ತಾಯಿ ನಾಗರತ್ನ ಅವರ ನೈಟಿ ಹಿಡಿದು ಹರಿದು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಪಲ್ಲವಿ ಹಾಗೂ ಅವರ ತಾಯಿ ನಾಗರತ್ನ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪಲ್ಲವಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share