ಮುಂಡಗೋಡ: ತಾಲೂಕಿನ ನಾಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡ ಚಿನ್ನಪ್ಪ ತಿರಕನವರ, ತಿಮ್ಮಣ್ಣ ಜಾಲನವರ, ಶಂಕರ ಬದನಗಾಡ, ಲಕ್ಷ್ಮಣ ಜಾಧವ್ ಬದನಗಾಡ, ಗಂಗಾಧರ ಅರೇರ, ಪ್ರಕಾಶ ಬದನಗಾಡ, ರವಿ ತಿರಕನವರ, ರಮೇಶ್ ಪಕೀರಪ್ಪ ಹಾಗೂ ಶಂಬಣ್ಣ ವಡ್ಡರ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎಂ. ನಾಯ್ಕ್ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ್, ಕಾಂಗ್ರೆಸ್ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ಕೆಂಜೋಡಿ ಗಲಬಿ, ಮುಂಡಗೋಡದ ಸಿದ್ದಣ್ಣ ಹಡಪದ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವೈ.ಪಿ. ಭುಜಂಗಿ, ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕ ಪರಶುರಾಮ ತಹಶೀಲ್ದಾರ್, ಮಹಮ್ಮದ್ ಗಾನಮಾನದಾರ, ಬಸವರಾಜ ಆಸಕ್ತೆಟ್ಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


