Thursday, October 22, 2026
HomeLocal Newsಅಂಗಡಿ ಬಳಿ ಕಟ್ಟು ಹಾವು; ಸುರಕ್ಷಿತವಾಗಿ ಕಾಡಿಗೆ ಕಳುಹಿಸಿದ ಅರಣ್ಯ ಸಿಬ್ಬಂದಿ

ಅಂಗಡಿ ಬಳಿ ಕಟ್ಟು ಹಾವು; ಸುರಕ್ಷಿತವಾಗಿ ಕಾಡಿಗೆ ಕಳುಹಿಸಿದ ಅರಣ್ಯ ಸಿಬ್ಬಂದಿ

ಮುಂಡಗೋಡ: ರಾತ್ರಿ ಹೊತ್ತು ಅಂಗಡಿಯೊಂದರ ಮುಂದೆ ಅಪಾಯಕಾರಿ ಕಟ್ಟು ಹಾವು ಕಾಣಿಸಿಕೊಂಡರೆ ಆತಂಕ ಸಹಜ. ಆದರೆ ಹಾವನ್ನು ಕೊಲ್ಲುವ ಬದಲು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಮೂಲಕ ಜನರ ಪ್ರಾಣದ ಜೊತೆಗೆ ಹಾವಿನ ಜೀವವನ್ನೂ ಉಳಿಸಿದ ಘಟನೆ ಮುಂಡಗೋಡ ತಾಲೂಕಿನ ಪಾಳಾ ಗ್ರಾಮದಲ್ಲಿ ನಡೆದಿದೆ.

ಅ.1ರಂದು ರಾತ್ರಿ 8.45ರ ಸುಮಾರಿಗೆ ಪಾಳಾ ಗ್ರಾಮದ ಇಬ್ರಾಹಿಂ ಮೌಲಾಲಿ ಉಪ್ಪಿನ್ ಅವರ ಕಿರಾಣಿ ಅಂಗಡಿಯ ಮುಂಭಾಗ ಕಟ್ಟು ಹಾವು (Common Krait) ಕಾಣಿಸಿಕೊಂಡಿತ್ತು. ಇದೇ ವೇಳೆ ಅಲ್ಲಿಗೆ ಬಂದಿದ್ದ ಅರಣ್ಯ ವೀಕ್ಷಕ ಜಗದೀಶ್ ಗೌಡ ಅವರು ಹಾವನ್ನು ಗಮನಿಸಿ, ತಕ್ಷಣ ಪಾಳಾ ಉಪ ವಲಯ ಅರಣ್ಯಾಧಿಕಾರಿ ಹಾಗೂ ಉರಗ ರಕ್ಷಕ ಸುನೀಲ್ ಹೊನ್ನಾವರ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಧಾವಿಸಿದ ಸುನೀಲ್ ಹೊನ್ನಾವರ ಅವರು ಯಾವುದೇ ಅಪಾಯವಾಗದಂತೆ ಕಟ್ಟು ಹಾವನ್ನು ಸುರಕ್ಷಿತವಾಗಿ ಹಿಡಿದರು. ಬಳಿಕ ಅದನ್ನು ಸಮೀಪದ ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ಹಾವನ್ನು ಹಿಡಿಯುವ ಸಂದರ್ಭದಲ್ಲಿ ಜನರು ಆತಂಕಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಹಾವುಗಳ ಬಗ್ಗೆ ಸ್ಥಳೀಯರಿಗೆ ಜಾಗೃತಿಯನ್ನೂ ಮೂಡಿಸಲಾಯಿತು. ಹಾವು ಕಂಡಾಗ ಅದನ್ನು ಹಿಡಿಯಲು ಅಥವಾ ಕೊಲ್ಲಲು ಮುಂದಾಗದೆ, ತಜ್ಞರು ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.

ಕಾರ್ಯಾಚರಣೆಯಲ್ಲಿ ಅರಣ್ಯ ವೀಕ್ಷಕ ಜಗದೀಶ್ ಗೌಡ, ಇಬ್ರಾಹಿಂ ಮೌಲಾಲಿ ಉಪ್ಪಿನ್, ನಿಸ್ಸಿಮ್ ತೋಟದ್, ಜಯಪ್ಪ ಹಿರೂರ್, ಶಿವರಾಜ್ ದೊಡ್ಡಮನಿ, ಮುಕಬುಲ್ ನಾಗರಹೊಳ್ಳಿ ಹಾಗೂ ಇಸುಬ್ ಭಟ್ಟಿ ಉಪಸ್ಥಿತರಿದ್ದರು.

ಹಾವಿನ ಬಗ್ಗೆ ಭಯ ಬೇಡ–ಆದರೆ ಜಾಗ್ರತೆ ಇರಲಿ. ಹಾವುಗಳೂ ಪರಿಸರದ ಪ್ರಮುಖ ಭಾಗವಾಗಿದ್ದು, ಅವುಗಳನ್ನು ರಕ್ಷಿಸುವ ಮೂಲಕ ಮಾನವ ಜೀವಕ್ಕೂ ಅಪಾಯವಾಗದಂತೆ ನೋಡಿಕೊಳ್ಳಬಹುದು ಎಂಬ ಸಂದೇಶ ಈ ಕಾರ್ಯಾಚರಣೆಯಿಂದ ಮತ್ತೊಮ್ಮೆ ಮೂಡಿಬಂದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share