Friday, October 23, 2026
HomeLocal Newsಜ್ಯೋತಿಷಿ ಗೋಪಾಲಕೃಷ್ಣ ಹಂಡ್ರಮನೆ ಅವರಿಗೆ ಸನ್ಮಾನ

ಜ್ಯೋತಿಷಿ ಗೋಪಾಲಕೃಷ್ಣ ಹಂಡ್ರಮನೆ ಅವರಿಗೆ ಸನ್ಮಾನ

ಯಲ್ಲಾಪುರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಯಲ್ಲಾಪುರ ತಾಲೂಕು ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಸನ್ಮಾನ ಮಾಲಿಕೆ ಮುಂದುವರಿದಿದೆ.

ಅ.4ರಂದು ಆಯೋಜಿಸಿದ್ದ ನಾಲ್ಕನೇ ರಾಪಿಡ್ ಚೆಸ್ ಟೂರ್ನಮೆಂಟ್ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಇದೇ ಸನ್ಮಾನ ಮಾಲಿಕೆಯ ಭಾಗವಾಗಿ ಪ್ರಸಿದ್ಧ ವೈದಿಕರು ಹಾಗೂ ಜ್ಯೋತಿಷಿಗಳಾದ ಗೋಪಾಲಕೃಷ್ಣ ಹಂಡ್ರಮನೆ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ನಾಗೇಂದ್ರ ಯಲ್ಲಾಪುರ ಹಾಗೂ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share