Ad
Ad
Ad
Home Local News ಕಾಳಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಬಚಾವಾದ ಪ್ರವಾಸಿ ದೋಣಿ

ಕಾಳಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಬಚಾವಾದ ಪ್ರವಾಸಿ ದೋಣಿ

0
11

ಜೋಯಿಡಾ: ತಾಲೂಕಿನ ಗಣೇಶಗುಡಿ–ಇಳವಾ ಭಾಗದ ಕಾಳಿ ನದಿಯಲ್ಲಿ ಬೃಹತ್ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಮೊಸಳೆಯಿದ್ದ ದಿಕ್ಕಿನಲ್ಲೇ ಪ್ರವಾಸಿ ದೋಣಿ ಸಾಗಿದ ಘಟನೆ ಆತಂಕಕ್ಕೆ ಕಾರಣವಾಗಿದೆ.

Ad

ನದಿಯ ಮೇಲಿನ ಸೇತುವೆಯಿಂದ ಸ್ಥಳೀಯರು ಮೊಸಳೆ ಇರುವುದನ್ನು ಗಮನಿಸಿ ದೋಣಿ ಚಾಲಕನಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ದೋಣಿ ಮುಂದಕ್ಕೆ ಸಾಗಿದ್ದು, ಮೊಸಳೆಯ ಚಲನವಲನವನ್ನು ಚಿತ್ರೀಕರಿಸುತ್ತಿದ್ದುದನ್ನು ಗಮನಿಸಿದ ಬಳಿಕ ಚಾಲಕ ದೋಣಿಯನ್ನು ಹಿಂದಕ್ಕೆ ತಿರುಗಿಸಿದ್ದಾನೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಮೊಸಳೆಗಳ ಸಂಚಾರವಿರುವ ಕಾಳಿ ನದಿಯಲ್ಲಿ ಕೆಲವು ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸದೆ ನೀರಿಗೆ ಇಳಿದು ಈಜುತ್ತಿರುವ ದೃಶ್ಯಗಳೂ ಕಂಡುಬಂದಿವೆ ಎನ್ನಲಾಗಿದೆ. ಇಂತಹ ಚಟುವಟಿಕೆಗಳು ಪ್ರವಾಸಿಗರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿರುವುದರಿಂದ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ದಾಂಡೇಲಿ ಮಾದರಿಯಲ್ಲಿ ಗಣೇಶಗುಡಿ–ಇಳವಾ ಭಾಗದಲ್ಲಿಯೂ ಅಗತ್ಯ ಸ್ಥಳಗಳಲ್ಲಿ ಕಬ್ಬಿಣದ ಬೇಲಿ ಅಳವಡಿಸಿ, ಮೊಸಳೆಗಳ ಸಂಚಾರವಿರುವ ಪ್ರದೇಶಗಳಲ್ಲಿ ಪ್ರವಾಸಿಗರು ನದಿಗೆ ಇಳಿಯದಂತೆ ತಡೆಯಬೇಕು. ಅಪಾಯದ ಸೂಚನಾ ಫಲಕಗಳನ್ನು ಅಳವಡಿಸಿ, ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಲ್ಲದೆ, ದೋಣಿ ಸಂಚಾರದ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!