Friday, October 23, 2026
HomeLocal Newsಸ್ಕಂದಮಾತೆಯ ಅಲಂಕಾರದಲ್ಲಿ ಕಂಗೊಳಿಸಿದ ಪಾರ್ವತಿ ದೇವಿ

ಸ್ಕಂದಮಾತೆಯ ಅಲಂಕಾರದಲ್ಲಿ ಕಂಗೊಳಿಸಿದ ಪಾರ್ವತಿ ದೇವಿ

ಬನವಾಸಿ: ಶರನ್ನವರಾತ್ರಿಯ ಸಂಭ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ದೇವಿಯ ವಿವಿಧ ಸ್ವರೂಪಗಳ ಆರಾಧನೆಗೆ ಭಕ್ತರು ಭಕ್ತಿಯಿಂದ ತೊಡಗಿದ್ದಾರೆ. ನವರಾತ್ರಿಯ ಐದನೇ ದಿನವಾದ ಗುರುವಾರ ಬನವಾಸಿಯ ದೇವಸ್ಥಾನದಲ್ಲಿ ಪಾರ್ವತಿ ದೇವಿಗೆ ಸ್ಕಂದಮಾತೆಯ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಿಯ ದಿವ್ಯರೂಪ ಭಕ್ತರ ಗಮನ ಸೆಳೆಯಿತು.

ನವರಾತ್ರಿಯ ಐದನೇ ದಿನ ಆರಾಧಿಸಲ್ಪಡುವ ಸ್ಕಂದಮಾತೆ, ಸುಬ್ರಹ್ಮಣ್ಯ ಸ್ವಾಮಿಯ ತಾಯಿಯ ರೂಪವೆಂದು ಪುರಾಣಗಳಲ್ಲಿ ವರ್ಣಿಸಲಾಗಿದೆ. ತಾಯಿಯ ಮಮತೆ, ಕರುಣೆ ಮತ್ತು ಸಂತಾನವನ್ನು ಪೊರೆಯುವ ಶಕ್ತಿಯ ಸಂಕೇತವಾಗಿ ಸ್ಕಂದಮಾತೆಯನ್ನು ಭಕ್ತರು ಆರಾಧಿಸುತ್ತಾರೆ.

ದೇವಸ್ಥಾನದ ಅರ್ಚಕ ನಾಗೇಶ ಪತ್ರೆ ಅವರು ದೇವಿಗೆ ವಿಶೇಷ ಅಲಂಕಾರ ನೆರವೇರಿಸಿ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಸ್ಕಂದಮಾತೆಯ ರೂಪದಲ್ಲಿ ಕಂಗೊಳಿಸಿದ ಪಾರ್ವತಿ ದೇವಿಯ ದರ್ಶನ ಪಡೆದ ಭಕ್ತರು ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share