Friday, October 23, 2026
HomeCrimeನಾದಿನಿ ದಂಪತಿಯ ಕಿರುಕುಳದ ಆರೋಪ: ಥಿನ್ನರ್ ಸೇವಿಸಿ ಮಹಿಳೆ ಸಾವು

ನಾದಿನಿ ದಂಪತಿಯ ಕಿರುಕುಳದ ಆರೋಪ: ಥಿನ್ನರ್ ಸೇವಿಸಿ ಮಹಿಳೆ ಸಾವು

ಶಿರಸಿ: ನಾದಿನಿ ಹಾಗೂ ಆಕೆಯ ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಥಿನ್ನರ್ ಸೇವಿಸಿ ಮೃತಪಟ್ಟಿರುವ ಘಟನೆ ಶಿರಸಿಯ ಗಣೇಶ ನಗರದಲ್ಲಿ ನಡೆದಿದೆ.

ಗದಗ ಮೂಲದ ರೇಣವ್ವ ಬೋವಿವಡ್ಡರ್ ಮೃತಪಟ್ಟ ಮಹಿಳೆ. ಇವರು 15 ವರ್ಷಗಳ ಹಿಂದೆ ಗಣೇಶ ನಗರದ ನಾಗೇಶ ಬೋವಿವಡ್ಡರ್ ಅವರನ್ನು ವಿವಾಹವಾಗಿದ್ದು, ದಂಪತಿಗೆ 12 ವರ್ಷದ ಮಗುವಿದೆ.

ನಾಗೇಶ ಅವರದು ಅವಿಭಕ್ತ ಕುಟುಂಬವಾಗಿದ್ದು, ತಂದೆ-ತಾಯಿಯೊಂದಿಗೆ ಸಹೋದರ ರಾಜು ಬೋವಿವಡ್ಡರ್ ಹಾಗೂ ಅವರ ಪತ್ನಿ ಸವಿತಾ ಬೋವಿವಡ್ಡರ್ ಕೂಡ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಪೊಲೀಸ್ ವಿವರಗಳ ಪ್ರಕಾರ, ಕೆಲ ದಿನಗಳ ಹಿಂದೆ ಬಿಸಿ ನೀರು ಕಾಯಿಸುವ ವಿಚಾರವಾಗಿ ರೇಣವ್ವ ಮತ್ತು ಸವಿತಾ ನಡುವೆ ಗಲಾಟೆ ನಡೆದಿತ್ತು. ಬಳಿಕ ರಾಜು ಮತ್ತು ಸವಿತಾ ಅವರು ರೇಣವ್ವ ಅವರನ್ನು ನಿಂದಿಸಿ, ಅವರೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.

ಗಂಡನ ಮನೆಯವರು ತಮ್ಮನ್ನು ದೂರವಿಟ್ಟು ಮಾತನಾಡುವುದನ್ನೂ ನಿಲ್ಲಿಸಿದ್ದಾರೆ ಎಂದು ರೇಣವ್ವ ಅವರು ತಾಯಿ ಲಕ್ಷವ್ವ ಬಂಡಿವಡ್ಡರ್ ಅವರ ಬಳಿ ಹೇಳಿಕೊಂಡಿದ್ದರು. ರಾಜು ಮತ್ತು ಸವಿತಾ ಅವರಿಂದ ಆಗುತ್ತಿದ್ದ ಕಿರುಕುಳದ ಬಗ್ಗೆಯೂ ತಿಳಿಸಿದ್ದರು ಎನ್ನಲಾಗಿದೆ.

ಈ ಕಿರುಕುಳದಿಂದ ಮನನೊಂದ ರೇಣವ್ವ ಅವರು ಅ. 13ರಂದು ಥಿನ್ನರ್ ಸೇವಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಸ್ವಸ್ಥಗೊಂಡ ಅವರನ್ನು ಅದೇ ದಿನ ರಾತ್ರಿ 11 ಗಂಟೆಯ ಸುಮಾರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಗಿತ್ತು. ಆದರೆ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share