Ad
Ad
Ad
Home Crime ಯಲ್ಲಾಪುರ | ಶಿರಸಿಯಿಂದ ಊರಿಗೆ ಮರಳುತ್ತಿದ್ದ ಯುವಕ ಬಾರದ ಲೋಕಕ್ಕೆ

ಯಲ್ಲಾಪುರ | ಶಿರಸಿಯಿಂದ ಊರಿಗೆ ಮರಳುತ್ತಿದ್ದ ಯುವಕ ಬಾರದ ಲೋಕಕ್ಕೆ

0
27

ಯಲ್ಲಾಪುರ: ಶಿರಸಿಯ ಶೋರೂಮ್‌ನಲ್ಲಿ ಸರ್ವಿಸಿಂಗ್‌ಗೆ ನೀಡಿದ್ದ ಬೈಕ್‌ ತೆಗೆದುಕೊಂಡು ಊರಿಗೆ ಮರಳುತ್ತಿದ್ದ 25 ವರ್ಷದ ಯುವಕ ವಿವೇಕ ಭಟ್ಟ ತಾರೆಹಳ್ಳಿ ಬಸ್ ನಿಲ್ದಾಣದ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Ad

ಯಲ್ಲಾಪುರ ತಾಲೂಕಿನ ಬಿಸಗೋಡ ಗ್ರಾಮದ ಕೆಳಗಿನಪಾಲದ ವಿವೇಕ ದತ್ತಾತ್ರೇಯ ಭಟ್ಟ (25) ಮೃತಪಟ್ಟವರು.ಪೊಲೀಸ್ ದೂರಿನ ಪ್ರಕಾರ, ವಿವೇಕ ಅವರು ತಮ್ಮ ಬೈಕ್‌ (ಕೆಎ-31/ಇಜಿ-5444) ಅನ್ನು ಶಿರಸಿಯ ಶೋರೂಮ್‌ನಲ್ಲಿ ಸರ್ವಿಸಿಂಗ್‌ಗೆ ನೀಡಿದ್ದರು.

ಅ. 17ರಂದು ಸಂಜೆ ಬೈಕ್‌ ವಾಪಸ್‌ ಪಡೆಯಲು ಬಸ್‌ನಲ್ಲಿ ಶಿರಸಿಗೆ ತೆರಳಿದ್ದರು. ರಾತ್ರಿ ಸುಮಾರು 11 ಗಂಟೆಗೆ ತಂದೆಗೆ ಫೋನ್ ಮಾಡಿ ಶಿರಸಿಯಿಂದ ಊರಿಗೆ ಮರಳುತ್ತಿರುವುದಾಗಿ ತಿಳಿಸಿದ್ದರು.

ಅ. 18ರಂದು ಬೆಳಗ್ಗೆ 7.45ರ ಸುಮಾರಿಗೆ ವಿವೇಕ ಅವರ ಸಂಬಂಧಿಕರಿಗೆ ಕರೆ ಬಂದಿದ್ದು, ತಾರೆಹಳ್ಳಿ ಬಸ್ ನಿಲ್ದಾಣದ ಸಮೀಪ ಬೈಕ್ ಅಪಘಾತದಲ್ಲಿ ಅವರು ಮೃತಪಟ್ಟಿರುವ ವಿಷಯ ತಿಳಿದುಬಂದಿದೆ.

ಬೈಕ್‌ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿ, ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮೃತರ ಸಂಬಂಧಿ ಮಂಜುನಾಥ ಭಟ್ಟ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!