Ad
Ad
Ad
Home Crime ಶಿರಸಿ | ಲಂಡಕನಳ್ಳಿಯಲ್ಲಿ ಕೌಶಲ್ಯದಾಟ: ಏಳು ಮಂದಿ ವಿರುದ್ಧ ಪ್ರಕರಣ

ಶಿರಸಿ | ಲಂಡಕನಳ್ಳಿಯಲ್ಲಿ ಕೌಶಲ್ಯದಾಟ: ಏಳು ಮಂದಿ ವಿರುದ್ಧ ಪ್ರಕರಣ

0
4

ಶಿರಸಿ: ತಾಲೂಕಿನ ಲಂಡಕನಳ್ಳಿ ಗ್ರಾಮದ ಆರ್.ಎನ್.ಎಸ್. ಕಾರ್ ಶೋ ರೂಂ ಎದುರಿನ ಎಸಳೆ ಕೆರೆ ದಂಡೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್‌ ಜುಗಾರಾಟ ಆಡುತ್ತಿದ್ದ ಆರೋಪದ ಮೇಲೆ ಏಳು ಮಂದಿಯ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad

ಅ. 19ರಂದು ರಾತ್ರಿ 12.10ರ ಸುಮಾರಿಗೆ ಆರೋಪಿತರು ಅದೃಷ್ಟದ ಎಲೆಗಳ ಮೇಲೆ ಹಣದ ಪಣ ಕಟ್ಟಿ ಇಸ್ಪೀಟ್‌ ಜುಗಾರಾಟ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳಿಂದ ರೂ.9,000 ನಗದು, ಇಸ್ಪೀಟ್‌ ಎಲೆಗಳು, ಒಂದು ಚಾರ್ಜಿಂಗ್ ಬ್ಯಾಟರಿ ಹಾಗೂ ಹಾಸಲು ಬಳಸುವ ಒಂದು ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಂ. ಅವರು ನೀಡಿದ ದೂರಿನ ಮೇರೆಗೆ ಪ್ರಸನ್ನ ವಾಲಿ (30), ಯೋಗೇಶ ಮಾನಯ್ಯನವರ (36), ಗುರುರಾಜ ಪಾಲೇಕರ (40), ಸಂತೋಷ ಮಾನಯ್ಯನವರ (30), ಪಾಂಡುರಂಗ ಬೆಂಡ್ಲಗಟ್ಟಿ (36), ಸಂದೀಪ್ ಪಾಠಣಕರ (45) ಹಾಗೂ ಅಭಿಷೇಕ ಭೋವಿ (29) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!