ಭಟ್ಕಳ: ತಾಲೂಕಿನ ಹಡಿನೆಣೆ ಅರಬ್ಬಿ ಸಮುದ್ರದ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಣ್ಣಯ್ಯನಹಿತ್ಲು ನಿವಾಸಿ ಸುರೇಶ ನಾಯ್ಕ (35) ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿದ್ದಾರೆ.
ಸುರೇಶ ನಾಯ್ಕ ಅವರು ಅ.21ರಂದು ಸಂಜೆ 5ರಿಂದ 6.45ರ ನಡುವಿನ ಅವಧಿಯಲ್ಲಿ ಹಡೀನ ಸಮುದ್ರದ ತೀರದಲ್ಲಿ ಕೈಬಲೆ ಬಳಸಿ ಮೀನುಗಾರಿಕೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಂದ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಕಾಣೆಯಾಗಿದ್ದರು.
ಅ.22ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಹಡಿನೆಣೆ ಅರಬ್ಬಿ ಸಮುದ್ರದ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮೃತರ ಸಹೋದರ ವಾಸುದೇವ ನಾಯ್ಕ (50) ಅವರು ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


