ಯಲ್ಲಾಪುರ: ಪಟ್ಟಣದ ಜೋಡುಕೆರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶ*ವ ಪತ್ತೆಯಾಗಿದೆ. ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮೃತ ವ್ಯಕ್ತಿಯು ಅಂದಾಜು 30 ವರ್ಷ ವಯಸ್ಸಿನವರಾಗಿರಬಹುದೆಂದು ತಿಳಿದುಬಂದಿದೆ. ಅವರು ಕಪ್ಪು ಬಣ್ಣದ ಚಕ್ಸ್ ಶರ್ಟ್ ಹಾಗೂ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದರು. ಅವರ ಬಲಗೈ ಕೈಕಟ್ಟಿನ ಮೇಲೆ ‘ಓಂ’ ಎಂಬ ಟ್ಯಾಟೂ ಇದ್ದು, ಬಲಗೈ ಮೊಣಕಟ್ಟಿನ ಕೆಳಭಾಗದಲ್ಲಿ “Mom Dad” ಎಂದು ಟ್ಯಾಟೂ ಹಾಕಿಸಿಕೊಂಡಿರುವುದು ಗುರುತಿನ ಲಕ್ಷಣವಾಗಿದೆ.
ಈ ಅಪರಿಚಿತ ವ್ಯಕ್ತಿಯ ಗುರುತು ಯಾರಿಗಾದರೂ ತಿಳಿದಿದ್ದಲ್ಲಿ ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.