ಬೆಂಗಳೂರು: ಬ್ರೂವರೀಸ್ ಹಾಗೂ ಮದ್ಯ ಮಾರಾಟ ಕೇಂದ್ರಗಳಿಗೆ ಬರುವ ಗ್ರಾಹಕರ ವಯಸ್ಸನ್ನು ಕಡ್ಡಾಯವಾಗಿ ಅಧಿಕೃತ ಗುರುತು ಪತ್ರಗಳ ಮೂಲಕ ಪರಿಶೀಲಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ M. Nagaprasanna, ಮದ್ಯ ಮಾರಾಟ ಕೇಂದ್ರಗಳಲ್ಲಿ ವಯಸ್ಸಿನ ಪರಿಶೀಲನೆ ಉದಾಸೀನವಾಗಿ ನಡೆಯಬಾರದು ಎಂದು ಸ್ಪಷ್ಟಪಡಿಸಿದರು.
ಅಪ್ರಾಪ್ತರು ಮದ್ಯಪಾನ ಮಾಡಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು, ಗ್ರಾಹಕರ ವಯಸ್ಸನ್ನು ಆಧಾರ್ ಅಥವಾ ಇತರ ಅಧಿಕೃತ ಗುರುತು ಪತ್ರಗಳ ಮೂಲಕ ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.
ಇದೇ ವೇಳೆ, ಅಪ್ರಾಪ್ತರಿಗೆ ಮದ್ಯ ನೀಡುವುದಿಲ್ಲ ಎಂಬ ಎಚ್ಚರಿಕೆಯ ಫಲಕಗಳನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ.ಈ ನಿರ್ದೇಶನವು ಅಪ್ರಾಪ್ತನೊಬ್ಬ ಮದ್ಯ ಸೇವಿಸಿದ ನಂತರ ದುರ್ಘಟನೆಗೆ ಗುರಿಯಾದ ಪ್ರಕರಣದ ಹಿನ್ನೆಲೆದಲ್ಲಿ ಹೊರಬಂದಿದೆ.
ಸಂಬಂಧಿತ ಪ್ರಕರಣದಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬ್ರೂವರೀಸ್ ಮತ್ತು ಇಂತಹ ಸಂಸ್ಥೆಗಳು ಗ್ರಾಹಕರ ಪ್ರವೇಶದ ವೇಳೆ ವಯಸ್ಸು ಪರಿಶೀಲನಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ನ್ಯಾಯಾಲಯ ಒತ್ತಿಹೇಳಿದೆ.