Friday, July 24, 2026
Join WhatsApp Group
HomeLocal Newsಮಂಚಿಕೇರಿಯ 'ರೀಲ್ಸ್ ಅಜ್ಜಿ' ಇನ್ನಿಲ್ಲ

ಮಂಚಿಕೇರಿಯ ‘ರೀಲ್ಸ್ ಅಜ್ಜಿ’ ಇನ್ನಿಲ್ಲ

ಯಲ್ಲಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ನಗುವಿಗೆ ಕಾರಣವಾಗಿದ್ದ ‘ರೀಲ್ಸ್ ಅಜ್ಜಿ’ ಖ್ಯಾತಿಯ ಮಂಚಿಕೇರಿಯ ಲಕ್ಷ್ಮಿ ನಾಯ್ಕ (93) ವಿಧಿವಶರಾಗಿದ್ದಾರೆ.

ವಯಸ್ಸಿನ ಮಿತಿಗಳನ್ನು ಮೀರಿ, ಇಳಿವಯಸ್ಸಿನಲ್ಲೂ ರೀಲ್ಸ್ ಮೂಲಕ ಜನಮನ ಗೆದ್ದಿದ್ದ ಈ ಅಜ್ಜಿಯ ಅಗಲಿಕೆ ಅಭಿಮಾನಿಗಳಿಗೆ ನೋವು ತಂದಿದೆ.ಕಿವಿ ಸರಿಯಾಗಿ ಕೇಳದಿದ್ದರೂ, ಕಣ್ಣು ಮಂಜಾಗಿದ್ದರೂ ಸಹ ತನ್ನ ಮೊಮ್ಮಗ ಹೇಳಿಕೊಟ್ಟಂತೆ ಅಭಿನಯಿಸುತ್ತಿದ್ದ ಅವರ ಸಹಜ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಸಾಮಾನ್ಯ ಗ್ರಾಮೀಣ ಜೀವನ ನಡೆಸುತ್ತಿದ್ದ ಅಜ್ಜಿ, ಸಾಮಾಜಿಕ ಜಾಲತಾಣಗಳ ಮೂಲಕ ಅಸಾಮಾನ್ಯ ಜನಪ್ರಿಯತೆ ಪಡೆದದ್ದು ವಿಶೇಷ.ತಮ್ಮ ಮರಿಮೊಮ್ಮಗ ಸೂರಜ್ ನಾಯ್ಕ ಜೊತೆ ಮಾಡಿದ ಸರಳ, ಮನರಂಜನೆಯ ರೀಲ್ಸ್‌ಗಳು ರಾಜ್ಯಾದ್ಯಂತ ವೈರಲ್ ಆಗಿ, ಅಜ್ಜಿ-ಮೊಮ್ಮಗ ಜೋಡಿಯನ್ನು ಮನೆಮಾತಾಗಿಸಿತ್ತು.

ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ ಲಕ್ಷ್ಮಿ ನಾಯ್ಕ ಅವರ ಜೀವನ, ಅನೇಕರಿಗೆ ಪ್ರೇರಣೆಯಾಗಿ ಉಳಿಯಲಿದೆ. ಇಂದು ಅವರು ಇಲ್ಲದಿದ್ದರೂ, ಅವರ ನಗು ಮತ್ತು ರೀಲ್ಸ್‌ಗಳು ಜನಮನದಲ್ಲಿ ಸದಾ ಜೀವಂತವಾಗಿಯೇ ಇರುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share