ಯಲ್ಲಾಪುರ: 110/33/11 ಕೆ.ವಿ ವಿದ್ಯುತ್ ಉಪಕೇಂದ್ರ ಕಿರವತ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.10ರಂದು ಗುರುವಾರ ಕಿರವತ್ತಿ ಹಾಗೂ ಯಲ್ಲಾಪುರ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ 110/33/11 ಕೆ.ವಿ ಕಿರವತ್ತಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಹೊಸಳ್ಳಿ, ಮದನೂರು, ಸೋಮಾಪುರ, ಕಿರವತ್ತಿ ಹಾಗೂ ಶ್ರೀಕೃಷ್ಣ ಡೈರಿ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಅದೇ ರೀತಿ 33/11 ಕೆ.ವಿ ಯಲ್ಲಾಪುರ ಉಪಕೇಂದ್ರದ 11 ಕೆ.ವಿ ಯಲ್ಲಾಪುರ ಪಟ್ಟಣ, ಇಡಗುಂದಿ, ವಜ್ರಳ್ಳಿ, ಬಿಸಗೋಡ, ಆನಗೋಡ, ದೇಹಳ್ಳಿ, ಮಾಗೋಡ, ಉಪಳೇಶ್ವರ (ಚಂದಗುಳಿ) ಹಾಗೂ ಕಣ್ಣಿಗೇರಿ ಮಾರ್ಗಗಳಲ್ಲಿಯೂ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಉಂಟಾಗಲಿರುವ ವಿದ್ಯುತ್ ವ್ಯತ್ಯಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ವಿದ್ಯುತ್ ಇಲಾಖೆ ಮನವಿ ಮಾಡಿದೆ.