ಯಲ್ಲಾಪುರ: ಪಟ್ಟಣದ ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರನ್ನು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 111ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಚಿಂತನ ಕಾರ್ಯಕ್ರಮದಲ್ಲಿ ಬೆಳಗಾವಿಯ ವಿರಕ್ತಿಮಠದ ಶ್ರೀ ಮುನಿಪ್ರ ಡಾ. ಮಹಾಂತೇಶ ಪ್ರಭು ಅವರು ಶಿವಲಿಂಗಯ್ಯ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದೆಹಲಿಯ ಪ್ರಮುಖರಾದ ಡಾ. ಬಿ. ಮನೋಜಕುಮಾರ, ಎಂಪಿ ಚಂದ್ರಶೇಖರ, ಶಿವಪ್ಪ ಎಂ., ರಾಜಶೇಖರ ಪಾಟೀಲ, ಕೃಷ್ಣರಾಜ ಕೆ.ಎನ್., ರಾಜಕುಮಾರ ನಿಲೂರು, ಪ್ರಭಾಕರ ಮಡ್ಡಿತೋಟ, ಅಶೋಕ ಹಣಮಸಾಗರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


