Friday, July 24, 2026
Join WhatsApp Group
HomeLocal News90 ಲಕ್ಷ ರೂ ಮೌಲ್ಯದ ಮದ್ಯಸಾರ, ವಾಹನ ಸೀಜ್!

90 ಲಕ್ಷ ರೂ ಮೌಲ್ಯದ ಮದ್ಯಸಾರ, ವಾಹನ ಸೀಜ್!

ಕಾರವಾರ: ಜೊಯಿಡಾ ತಾಲೂಕಿನ ರಾಮನಗರದಲ್ಲಿರುವ ಧಾರವಾಡ-ಗೋವಾ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ಒಂದು ಟಾಟಾ ಕಂಪನಿಯ ಟ್ಯಾಂಕರ್ (MP-09 HH-1908)ನಲ್ಲಿ 30 ಸಾವಿರ ಲೀಟರ್ Denatured rectified spirit (non potable)  ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ದಾವಣೆಗೆರೆ ಶುಗರ್ ಕಂಪನಿ ಲಿಮಿಟೆಡ್ ಇಲ್ಲಿಂದ ಗೋವಾ ರಾಜ್ಯದ ಗ್ಲೋಬಲ್ ಕಮ್ ಕಾರ್ಪ್ ಕುಂಡೇಮ್ ಇಲ್ಲಿಗೆ ಸಾಗಿಸುತ್ತಿರುವುದನ್ನು ಹಾಗೂ ಇನ್ನೊಂದು ಟ್ಯಾಂಕರ್ ಲಾರಿ ನೋಂದಣಿ ಸಂಖ್ಯೆ KA-48 A-2218ರಲ್ಲಿ ಶ್ರೀ ಸಾಯಿ ಟ್ರೇಡರ್ಸ್ & ಕಂಪನಿ, ಕೊಲೆಹಳ್ಳಿ ಹಡದಿ ರೋಡ್, ದಾವಣಗೆರೆ ತಾಲೂಕು, ದಾವಣಗೆರೆ ಜಿಲ್ಲೆ ಇಲ್ಲಿಂದ ವರ್ಧನ್ ಸಿಮೆಂಟ್ಸ್ ಇಂಡಿಯಾ ಪ್ರೈ.ಲಿ. ಪಿಲರ್ನ ಇಂಡಸ್ಟ್ರೀಯಲ್ ಎಸ್ಟೇಟ್ ರಿಯಾ, ಗೋವಾ ಇಲ್ಲಿಗೆ 20 ಸಾವಿರ ಲೀಟರ್ Ethanol (Non Potable Purpose) ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಗಿಸಲಾಗುತ್ತಿದ್ದ ವಾಹನಗಳನ್ನು ಅಬಕಾರಿ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ.

 ಅಬಕಾರಿ ಇಲಾಖೆಯ ಮಂಗಳೂರು ವಿಭಾಗ, ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಎ.ಎಲ್. ನಾಗೇಶ, ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಎ. ಅವರ ಮಾರ್ಗದರ್ಶನದಂತೆ ಫೆಬ್ರವರಿ 21ರಂದು ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿತ್ತು.

ಈ ಟ್ಯಾಂಕರ್ ಗಳಲ್ಲಿದ್ದ ಮದ್ಯಸಾರವನ್ನು ಪ್ರೈಮರಿ ಡಿಸ್ಟಿಲರಿಯ ಕೆಮಿಸ್ಟ್ ನ್ನು ಸ್ಥಳಕ್ಕೆ ಕರೆಯಸಿ ಆಲ್ಕೋ ಮೀಟರ್ ಉಪಕರಣದ ಮೂಲಕ ಪರೀಕ್ಷೆ ಮಾಡಿಸಲಾಗಿ, ಅದು Extra Neutral Alcohol ಆಗಿರುವುದು ಕಂಡುಬಂದಿದ್ದರಿಂದ ಸದರಿ ಎರಡೂ ಟ್ಯಾಂಕರ್ ಗಳನ್ನು ಹಾಗೂ ಅವುಗಳಲ್ಲಿದ್ದ 50 ಸಾವಿರ ಲೀಟರ್ Extra Neutral Alcoholನ್ನು ಜಪ್ತುಪಡಿಸಿ, ಟ್ಯಾಂಕರ್ ಚಾಲಕರುಗಳಾದ ಇಂದೋರ್‌ನ ಮಗ್ನರ್ ಸಿಂಗ್ ಬಿನ್ ಮೋಹನ್ ಸಿಂಗ್ ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ಇವರನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ಇವರು ಹಾಗೂ ಅಬಕಾರಿ ನಿರೀಕ್ಷಕರು ದಾಂಡೇಲಿ ವಲಯ ಇವರು ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದು, ಜಫ್ತುಪಡಿಸಿದ ತಟಸ್ಥ ಮದ್ಯಸಾರದ ಅಂದಾಜು ಬೆಲೆ 40 ಲಕ್ಷ ರೂಗಳಾಗಿದ್ದು, ಗಳಾಗಿದ್ದು, ಟ್ಯಾಂಕರ್ ಗಳ ಅಂದಾಜು ಬೆಲೆ 50 ಲಕ್ಷ ರೂ ಒಟ್ಟು ಅಂದಾಜು 90 ಲಕ್ಷ ರೂಪಾಯಿಗಳಾಗಿವೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share