Home Crime ಜೇನುಕಲ್ಲು ಗುಡ್ಡದಲ್ಲಿ ಅಂತ್ಯವಾಯ್ತು ಯುವಕನ ಜೀವನ

ಜೇನುಕಲ್ಲು ಗುಡ್ಡದಲ್ಲಿ ಅಂತ್ಯವಾಯ್ತು ಯುವಕನ ಜೀವನ

0
49

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಜೇನುಕಲ್ಲು ಗುಡ್ಡದಿಂದ ಜಿಗಿದು ಧಾರವಾಡ ಮೂಲದ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ಶ್ರೀನಿಧಿ ಕಡಕೋಳ (23) ಎಂದು ಗುರುತಿಸಲಾಗಿದೆ. ಇವರು Dharwad ಜಿಲ್ಲೆಯ ಹೊಸಯಲ್ಲಾಪುರ ನಿವಾಸಿಯಾಗಿದ್ದರು.

Ad

ಮಾಹಿತಿಯ ಪ್ರಕಾರ, ಶ್ರೀನಿಧಿ ಅವರು ಮನೆಯಿಂದ ಸ್ಕೂಟಿಯಲ್ಲಿ ಗೋಕರ್ಣಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದರು. ಆದರೆ ಏನೋ ವೈಯಕ್ತಿಕ ಕಾರಣದಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ಯಲ್ಲಾಪುರದ ಜೇನುಕಲ್ಲು ಗುಡ್ಡದಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮೃತನ ತಂದೆ ಕೃಷ್ಣ ಕಡಕೋಳ ಅವರು ಪೊಲೀಸರಿಗೆ ದೂರು ನೀಡಿದ್ದು, ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ. ಶನಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳು ಪ್ರಪಾತಕ್ಕೆ ಬಿದ್ದಿದ್ದ ಮೃತದೇಹವನ್ನು ಮೇಲಕ್ಕೆ ತರುವ ಕಾರ್ಯಾಚರಣೆ ನಡೆಸಿದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!