ಯಲ್ಲಾಪುರ: ಇಲ್ಲಿನ ರವೀಂದ್ರ ನಗರದ ಸಭಾಭವನದಲ್ಲಿ ಯುಗಾದಿ ಉತ್ಸವದ ನಿಮಿತ್ತ ಭಾರತ ಮಾತಾ ಭಾವಚಿತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಾರ್ಡ್‌ಗಳ ಪ್ರತಿಯೊಂದು ಮನೆಯಲ್ಲಿ ಭಾರತ ಮಾತೆಯ ಭಾವಚಿತ್ರ ಇರಬೇಕು ಹಾಗೂ ಪ್ರತಿನಿತ್ಯ ತಾಯಿ ಭಾರತಿಯನ್ನು ಪೂಜಿಸಬೇಕು ಎಂಬ ಉದ್ದೇಶದಿಂದ ರವೀಂದ್ರನಗರದ 17 ಮತ್ತು 18ನೇ ವಾರ್ಡ್‌ಗಳಲ್ಲಿ ಸೋಮಣ್ಣ ಗೆಳೆಯರ ಬಳಗದ ವತಿಯಿಂದ ಸುಮಾರು 300ಕ್ಕೂ ಹೆಚ್ಚು ಮನೆಗಳಿಗೆ ಭಾರತ ಮಾತೆಯ ಭಾವಚಿತ್ರ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಬಾಲಕೃಷ್ಣ ನಾಯಕ್ ಹಾಗೂ ಪ್ರಸಾದ್ ಹೆಗಡೆ ಮನೆ ಮನೆಗೆ ಭಾರತ ಮಾತೆಯ ಭಾವಚಿತ್ರಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಚಂದ್ರು ಕಟ್ಟಿಮನಿ ದೇಶಭಕ್ತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ದೇಶಭಕ್ತಿಯ ಸೊಗಡು ನೀಡಿದರು.
ವೇದಿಕೆಯಲ್ಲಿ ನಾಗೇಂದ್ರ ಭಟ್, ಕುಮುದ ಶೇಣೆ, ರಾಧಾ ಮರಾಠೆ, ಆನಂದ ಜಿ. ಅತ್ತಾರರ್ವಾಲ, ರಾಜು ಬುದ್ದಿ, ಬಾಬು ದೇಸಾಯಿ, ನರೇಶ್ ಯಾಮಕೆ, ಗಿರೀಶ್ ಭೋವಿ ವಡ್ಡರ್, ಸೋಮೇಶ್ವರ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.