Friday, May 29, 2026
HomeLocal Newsನವೋದಯ ಪ್ರವೇಶ ಪರೀಕ್ಷೆ: ಶ್ರಾವ್ಯಾ ಹೆಗಡೆ ಸಾಧನೆ

ನವೋದಯ ಪ್ರವೇಶ ಪರೀಕ್ಷೆ: ಶ್ರಾವ್ಯಾ ಹೆಗಡೆ ಸಾಧನೆ

ಯಲ್ಲಾಪುರ: 2026ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಶ್ರಾವ್ಯಾ ಶ್ರೀರಾಮ ಹೆಗಡೆ ಆಯ್ಕೆಯಾಗಿದ್ದು, ಶಾಲೆ ಹಾಗೂ ಊರಿಗೆ ಹೆಮ್ಮೆ ತಂದಿದ್ದಾಳೆ.

ಮಾಗೋಡು ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿರುವ ಶ್ರಾವ್ಯಾ, ಶಿಕ್ಷಕ ದಂಪತಿಗಳಾದ ಶ್ರೀರಾಮ ಹೆಗಡೆ ಮತ್ತು ಸೌಮ್ಯ ಭಾಗ್ವತ ಅವರ ಪುತ್ರಿಯಾಗಿದ್ದಾಳೆ. ತನ್ನ ಪರಿಶ್ರಮ ಮತ್ತು ಏಕಾಗ್ರತೆಯಿಂದ ಈ ಸಾಧನೆ ಮಾಡಿರುವ ಶ್ರಾವ್ಯಾಗೆ ಶಾಲಾ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ವಿದ್ಯಾಭ್ಯಾಸದಲ್ಲೂ ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ ಎಂದು ಹಾರೈಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Share