ಮೈಸೂರು :ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೋಮಲಾಪುರ ಗ್ರಾಮದ ಆಶಾ ಎ.ವಿ ಅವರು ನ್ಯಾಷನಲ್ ವೆಟರನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್–2026ರಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿದ್ದಾರೆ. ಪಂಜಾಬ್‌ನ ಬಂಟೀಡದಲ್ಲಿರುವ ಗುರುಕಾಶಿ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ನಡೆದ 45ನೇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಅವರು ಹಲವು ವಿಭಾಗಗಳಲ್ಲಿ ಮಿಂಚಿದ್ದಾರೆ.
ಆಶಾ ಎ.ವಿ ಅವರು
ಶಾಟ್‌ಪುಟ್‌ನಲ್ಲಿ ಪ್ರಥಮ ಸ್ಥಾನ, ಹ್ಯಾಮರ್ ತ್ರೋದಲ್ಲಿ ದ್ವಿತೀಯ ಸ್ಥಾನ, ಡಿಸ್ಕಸ್ ತ್ರೋದಲ್ಲಿ ದ್ವಿತೀಯ ಸ್ಥಾನ, 4×100 ಮಿಕ್ಸ್ಡ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಅವರ ಈ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ಪರಿಶ್ರಮ, ಶಿಸ್ತು ಹಾಗೂ ನಿಷ್ಠೆಯ ಪ್ರತೀಕವಾಗಿದೆ. ರಾಜ್ಯ ಹಾಗೂ ಮೈಸೂರು ಜಿಲ್ಲೆಗೆ ಹೆಮ್ಮೆಯಾಗಿ ಹೊರಹೊಮ್ಮಿದ ಈ ಸಾಧನೆಗೆ ವಕೀಲ ಸುದೀಶ್ ಕೆ.ಬಿ (ಜಿಲ್ಲಾ ಕರವೇ ಕಾನೂನು ಘಟಕದ ಅಧ್ಯಕ್ಷರು), ಮೈಸೂರು ಜಿಲ್ಲಾ ಕರವೇ ಉಪಾಧ್ಯಕ್ಷ ಧನರಾಜು, ಪಿರಿಯಾಪಟ್ಟಣ ತಾಲ್ಲೂಕು ಅಧ್ಯಕ್ಷ ಶೇಖ್ ಅಸ್ಲಾಂ ಸೇರಿದಂತೆ ಅನೇಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಮೆರೆಯುವ ಮೂಲಕ ನಾಡಿನ ಕೀರ್ತಿಯನ್ನು ಎತ್ತಿದ ಆಶಾ ಎ.ವಿ ಅವರಿಗೆ ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ವಕೀಲ ಸುದೀಶ್ ಕೆ.ಬಿ ತಿಳಿಸಿದ್ದಾರೆ.