Friday, July 24, 2026
Join WhatsApp Group
HomeNationalಪಾನ್‌ ಉಗುಳಿದ್ದಕ್ಕೆ ಭಾರೀ ದಂಡ!

ಪಾನ್‌ ಉಗುಳಿದ್ದಕ್ಕೆ ಭಾರೀ ದಂಡ!

ಲಂಡನ್‌ನಲ್ಲಿ ಭಾರತೀಯ ಮೂಲದ ಮೂವರಿಗೆ ದಂಡ

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಪಾನ್‌ ಉಗುಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ಮೂವರು ವ್ಯಕ್ತಿಗಳಿಗೆ ಭಾರೀ ದಂಡ ವಿಧಿಸಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ.

ಎಡ್ಗ್‌ವೇರ್ ನಿವಾಸಿಗಳಾದ ಅಕ್ಷಿತ್‌ ಕುಮಾರ್‌ ಮತ್ತು ಹಿತೇಶ್‌ ಪಟೇಲ್‌ ಜೂನ್‌ 11, 2025ರಂದು ಕಿಂಗ್ಸ್‌ಬರಿ ರಸ್ತೆಯಲ್ಲಿ ಪಾನ್‌ ಉಗುಳಿದ ಹಿನ್ನೆಲೆಯಲ್ಲಿ ಆರಂಭದಲ್ಲಿ ತಲಾ 100 ಯುರೋ ದಂಡ ವಿಧಿಸಲಾಗಿತ್ತು.

ಆದರೆ ದಂಡ ಪಾವತಿಸದೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ಬಳಿಕ ದಂಡವನ್ನು 1,391 ಯುರೋಗೆ ಹೆಚ್ಚಿಸಲಾಗಿದೆ.

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ರುಯಿಪ್ಲಸ್ ನಿವಾಸಿ ಹಿತೇಶ್‌ ಪಟೇಲ್‌ ಜೂನ್‌ 12ರಂದು ವೆಂಬ್ಲಿ ಹಿಲ್‌ ರಸ್ತೆಯಲ್ಲಿ ಪಾನ್‌ ಉಗುಳಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದು, ವಿಚಾರಣೆಗೆ ಗೈರಾಗಿದ್ದ ಕಾರಣ ನ್ಯಾಯಾಲಯವು ಅವರಿಗೂ 1,391 ಯುರೋ ದಂಡ ವಿಧಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪಾನ್‌ ಉಗುಳುವುದರಿಂದ ಉಂಟಾಗುವ ಕಲೆಗಳನ್ನು ತೆರವುಗೊಳಿಸಲು ವರ್ಷಕ್ಕೆ ಸಾವಿರಾರು ಯುರೋ ವೆಚ್ಚವಾಗುತ್ತಿದ್ದು, ಯಂತ್ರಗಳ ಸಹಾಯದಿಂದಲೂ ಇವುಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದು ಕಷ್ಟಕರವೆಂದು ಅಧಿಕಾರಿಗಳು ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share