Saturday, May 30, 2026
HomeAgricultureFarmer ID; ಇದಿಲ್ಲದಿದ್ದರೆ ನೀವು ರೈತರೇ ಅಲ್ಲ!

Farmer ID; ಇದಿಲ್ಲದಿದ್ದರೆ ನೀವು ರೈತರೇ ಅಲ್ಲ!

ಎಫ್‌ಐಡಿ ಎಂಬ ರೈತನ ಡಿಜಿಟಲ್‌ ಗುರುತು ಎಷ್ಟು ಮುಖ್ಯ?

ಭಾರತದಲ್ಲಿ ಲಕ್ಷಾಂತರ ರೈತರು ಬದುಕುತ್ತಿದ್ದಾರೆ. ಇವರಲ್ಲಿ ಬಹುತೇಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಇವರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.

ಅದರಲ್ಲಿ ಪ್ರಮುಖವಾದುದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ  6 ಸಾವಿರ ರೂ ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ ಈಗ ಈ ಯೋಜನೆಯ ಲಾಭ ಪಡೆಯಲು ರೈತರಿಗೆ “Farmer ID” ಎಂಬ ಡಿಜಿಟಲ್ ಗುರುತು ಕಡ್ಡಾಯವಾಗುತ್ತಿದೆ.

ಈ ಐಡಿ ಇಲ್ಲದಿದ್ದರೆ ಹಣದ ಜಮಾ ವಿಳಂಬವಾಗುವ ಅಥವಾ ನಿಲ್ಲುವ ಸಾಧ್ಯತೆ ಇದೆ ಎಂದು ಸರ್ಕಾರ ತಿಳಿಸಿದೆ. Farmer ID ಎಂದರೆ ರೈತನ ಸಂಪೂರ್ಣ ಡಿಜಿಟಲ್ ಪ್ರೊಫೈಲ್ ಆಗಿದ್ದು, ಅದರಲ್ಲಿ ರೈತನ ಭೂಮಿ ವಿವರಗಳು, ಜಮೀನು ಇರುವ ಸ್ಥಳ, ಬೆಳೆಗಳ ಮಾಹಿತಿ, ಬೀಜ ಮತ್ತು ರಸಗೊಬ್ಬರ ಬಳಕೆ, ಪಶುಸಂಗೋಪನೆ ಹಾಗೂ ಕೃಷಿಯಿಂದಾಗುವ ಆದಾಯದಂತಹ ಪ್ರಮುಖ ಮಾಹಿತಿಗಳು ಒಳಗೊಂಡಿರುತ್ತವೆ.

ಈ ಮಾಹಿತಿಯ ಆಧಾರದಲ್ಲಿ ಸರ್ಕಾರ ಯಾವ ರೈತರಿಗೆ ಯಾವ ಯೋಜನೆಗಳನ್ನು ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ. ವಿಶೇಷವಾಗಿ ಪಿಎಂ ಕಿಸಾನ್ ಯೋಜನೆಯ ಹಣವನ್ನು ನೇರವಾಗಿ ಸರಿಯಾದ ರೈತನ ಖಾತೆಗೆ ತಲುಪಿಸಲು ಈ Farmer ID ಸಹಾಯ ಮಾಡುತ್ತದೆ. ಇದರಿಂದ ನಕಲಿ ನೋಂದಣಿ, ಡುಪ್ಲಿಕೇಟ್ ಹೆಸರುಗಳಂತಹ ಸಮಸ್ಯೆಗಳನ್ನೂ ತಡೆಹಿಡಿಯಬಹುದು.

ಮುಂದಿನ ದಿನಗಳಲ್ಲಿ ಹೆಚ್ಚಿನ ಕೃಷಿ ಯೋಜನೆಗಳು, ಸಬ್ಸಿಡಿಗಳು ಹಾಗೂ ವಿಮಾ ಸೌಲಭ್ಯಗಳು ಕೂಡ ಈ Farmer ID ಮುಖಾಂತರವೇ ನೀಡಲಾಗುವ ಸಾಧ್ಯತೆ ಇದೆ. Farmer ID ಪಡೆಯಲು ರೈತರು ತಮ್ಮ ರಾಜ್ಯದ AgriStack ಪೋರ್ಟಲ್‌ಗೆ ಭೇಟಿ ನೀಡಿ ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಬೇಕು.

ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮೊಬೈಲ್‌ಗೆ ಬರುವ OTP ಮೂಲಕ ಪರಿಶೀಲನೆ ನಡೆಸಿ, ಬಳಿಕ ಮತ್ತೆ ಮೊಬೈಲ್ ಸಂಖ್ಯೆ ದೃಢೀಕರಿಸಿ ಪಾಸ್‌ವರ್ಡ್ ರಚಿಸಿದರೆ ಬಳಕೆದಾರ ಖಾತೆ ಸೃಷ್ಟಿಯಾಗುತ್ತದೆ.

ನಂತರ ಲಾಗಿನ್ ಆಗಿ Farmer Type ನಲ್ಲಿ “Owner” ಆಯ್ಕೆ ಮಾಡಿ, “Fetch Land Detail” ಆಯ್ಕೆಯಲ್ಲಿ ಖಾತಾ ಸಂಖ್ಯೆ ಹಾಗೂ ಭೂಮಿ ವಿವರಗಳನ್ನು ನಮೂದಿಸಬೇಕು. ರೈತನಿಗೆ ಒಂದಕ್ಕಿಂತ ಹೆಚ್ಚು ಜಮೀನುಗಳಿದ್ದರೆ ಎಲ್ಲಾ ವಿವರಗಳನ್ನು ದಾಖಲಿಸುವುದು ಕಡ್ಡಾಯ.

ಈ ಎಲ್ಲಾ ಮಾಹಿತಿ ಸರಿಯಾಗಿ ನಮೂದಿಸಿದ ಬಳಿಕ Farmer ID ಸೃಷ್ಟಿಯಾಗುತ್ತದೆ ಮತ್ತು ರೈತರು ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಅರ್ಹರಾಗುತ್ತಾರೆ.

ಒಟ್ಟಾರೆ, Farmer ID ವ್ಯವಸ್ಥೆ ರೈತರಿಗೆ ಸರಿಯಾದ ಲಾಭ ತಲುಪಿಸಲು ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಕೈಗೊಂಡಿರುವ ಮಹತ್ವದ ಹೆಜ್ಜೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share