ಕಾರವಾರ: ನಗರದ ಸಾಯಿಕಟ್ಟಾ ಸಾಯಿಮಂದಿರ ಎದುರು ಎರಡು ಗುಂಪಿನ ನಡುವೆ ನಡೆದ ಗಲಾಟೆ ಹಿನ್ನೆಲೆಯಲ್ಲಿ 10 ಜನರ ವಿರುದ್ಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 8ರಂದು ರಾತ್ರಿ ಸುಮಾರು 11.30ರ ವೇಳೆ ಸಾಯಿಕಟ್ಟಾ ಪ್ರದೇಶದಲ್ಲಿ ಎರಡು ಗುಂಪಿನವರು ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಹೊಡೆದಾಡಿಕೊಂಡು ಶಾಂತಿಭಂಗ ಉಂಟುಮಾಡಿದ್ದರು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದರು.
ಈ ಸಂಬಂಧ ವಿದ್ಯಾಧರ ಮೇತ್ರಿ, ಕೃಷ್ಣಾನಂದ ನಾಯ್ಕ, ಜಗದೀಶ ನಾಯ್ಕ, ಸಂಜಯ ನಾಯ್ಕ, ಓಂಕಾರ ನಾಯ್ಕ, ಸಾಯಿಕಿರಣ ಪಂಚೇಕರ, ರೋಹನ ನಾಯ್ಕ, ವಿಜಯ ಮೊಗೇರ, ವೈಭವ ಕುಡ್ತರಕರ ಹಾಗೂ ವೇದ ಪಾವಸ್ಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಿಗೆ ಭಯ, ಆತಂಕ ಹಾಗೂ ತೊಂದರೆ ಉಂಟುಮಾಡಿದ ಆರೋಪದಡಿ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.